ನಗೆಹನಿಗಳು
ರಾಮು ಆಫೀಸ್ ಲ್ಲಿ ತನ್ನ ಮೇಲಧಿಕಾರಿಯ ಹತ್ತಿರ ಹೋಗಿ ಕೇಳಿದ
ರಾಮು: "ಬಾಸ್, ನಾಳೆ ನಾವು ಮನೆಯನ್ನು ಪೂರ್ತಿಯಾಗಿ ಕ್ಲೀನ್ ಮಾಡ್ತಾ ಇದೀವಿ. ನನ್ನ ಹೆಂಡತಿ ಅತ್ತಣಿಗೆ ಹಾಗೂ ಗ್ಯಾರೇಜ್ ಕ್ಲೀನ್ ಮಾಡೋದಕ್ಕೆ ನನ್ನ ಸಹಾಯ ಬೇಕು ಅಂತ ಹೇಳಿದಾಳೆ"
ಬಾಸ್: "ನೋಡು ರಾಮು, ಮೊದಲೇ ಜನರು ಕಡಿಮೆ ಇದ್ದಾರೆ, ಅಲ್ಲದೇ ಕೆಲಸಾನೂ ತುಂಬಾ ಇದೆ. ನಿನಗೆ ರಜಾ ಕೋಡೋದಕ್ಕೆ ಆಗಲ್ಲ"
ರಾಮು: "ಥ್ಯಾಂಕ್ಯೂ ಬಾಸ್, ನನಗೆ ಗೊತ್ತಿತ್ತು ನಿಮ್ಮ ಮೇಲೆ ಭರವಸೆ ಇಟ್ಕೋ ಬಹುದು ಅಂತ"
*****************************************************
ಆಸ್ಪತ್ರೆಯ ತುರ್ತು ಸಹಾಯ ವಿಭಾಗಕ್ಕೆ ಫೋನ್ ಬಂತು. ರಾಮು ಫೋನ್ ಎತ್ತಿ "ಹೆಲೋ" ಎಂದ.
ಆ ಕಡೆಯಿಂದ "ಹೆಲೋ, ನಾನು ಸೋಮು ಮಾತಾಡ್ತಾ ಇರೋದು. ನನಗೆ ಉಸಿರಾಟದ ತೊಂದರೆ ಆಗಿದೆ. ಶ್ವಾಸ ಹೋಗಿ ಸತ್ತು ಹೋಗ್ತೀನೇನೋ ಅನ್ನಿಸ್ತಾ ಇದೆ"
ರಾಮು: "ಎಲ್ಲಿಂದ ಮಾತಾಡ್ತಾ ಇದೀರಾ?"
ಸೋಮು: "ಬನಶಂಕರಿ ದೇವಸ್ಥಾನದ ಹತ್ತಿರ ಟೆಲಿಫೋನ್ ಬೂತ್ ನಿಂದ"
ರಾಮು: "ಆಂಬುಲೆನ್ಸ್ ಇನ್ನೇನು ಬರ್ತಾ ಇದೆ. ನಿಮಗೆ ಅಸ್ತಮಾ ಇದೆಯಾ?"
ಸೋಮು: "ಇಲ್ಲ"
ರಾಮು: "ಉಸಿರಾಟದ ತೊಂದರೆ ಆಗೋಕೆ ಮುಂಚೆ ಏನು ಮಾಡ್ತಾ ಇದ್ರಿ?"
ಸೋಮು: "ಓಡಿ ಬರ್ತಾ ಇದ್ದೆ, ಪೊಲೀಸರಿಂದ ತಪ್ಪಿಸ್‌ಕೊಂಡು"
ರಾಮು: "!?!"
*******************************************