ನಗೆ ಹನಿಗಳು...
ಬರಹ
ಸೇಡು..
ಸೊಳ್ಳೆಯ ಮೇಲೆ ಸೇಡು ತೀರಿಸಿಕೊಳ್ಳುವ ಬಗೆ..
ಒಂದು ಸೊಳ್ಳೆಯನ್ನು ಹಿಡಿದು ಹಾಡು ಹೇಳಿ ಅದನ್ನು ಮಲಗಿಸಿ
ಅದರ ಕಿವಿಯಲ್ಲಿ "ಗುಯ್..ಗುಯ್...ಗುಯ್..." ಎಂದು ಕಿರುಚುವುದು.
******************************************************
ಸ್ವಾಮಿ ಅಯ್ಯಪ್ಪ..
ಕರ್ನಾಟಕ ದ ರಾಜಕೀಯ "ಸ್ವಾಮಿ ಅಯ್ಯಪ್ಪ" ನ ಕೈಯಲ್ಲಿ
ಏನೆಂದು ಅರ್ಥ ಆಗಲಿಲ್ಲವೇ?
ಕುಮಾರ "ಸ್ವಾಮಿ"
ಸಿದ್ದರಾಮ "ಅಯ್ಯ"
ಯಡಿಯೂರ್ "ಅಪ್ಪ"
ಯಾವ ದೇವರು ಕರ್ನಾಟಕವನ್ನು ಕಾಪಾಡುವನೋ??
*******************************************************
ಮದುವೆ ಕಸ್ಟಮರ್ ಕೇರ್..
ಸಂಬಂಧಗಳಿಗಾಗಿ ಒಂದನ್ನು ಒತ್ತಿ..
ನಿಶ್ಚಿತಾರ್ಥಕ್ಕಾಗಿ ಎರಡನ್ನು ಒತ್ತಿ..
ಮದುವೆಗಾಗಿ ಮೂರನ್ನು ಒತ್ತಿ...
ಎರಡನೇ ಮದುವೆಗಾಗಿ ಮೊದಲನೆಯ ಕುತ್ತಿಗೆ ಒತ್ತಿ..
****************************************************************
(S.M.S. ಸಂಗ್ರಹ)