ನಗೆ ಹನಿ

ನಗೆ ಹನಿ

ಮೊನ್ನೆ ದೆಹಲಿ ಕರ್ನಾಟಕ ಸಂಘದ ಕಾರ್ಯಕ್ರಮವೊಂದಕ್ಕೆ ಹೋಗಿದ್ದೆ. 

'ಈಗ ಶ್ರೀಮತಿ ರಾಣಿ ಭಟ್ ಅವರಿಂದ ಸ್ವಾಗತ ಗೀತೆ' ಎಂಬುದನ್ನು ಕೇಳಿದಾಗ ಥಟ್ಟನೆ ನನ್ನ ಹೈ ಸ್ಕೂಲ್ ಸಹಪಾಠಿ ರಾಣಿ ಭಟ್ ಎಂಬವಳ‌ ನೆನಪಾಯಿತು; ಏಕೆಂದರೆ, ಅವಳೂ ಒಳ್ಳೆಯ ಹಾಡುಗಾರ್ತಿಯಾಗಿದ್ದಳು. ಆವಳೇ ಇವಳಿರಬಹುದೇ ಎಂದು ಯೋಚಿಸಿದೆ. ಶ್ರೀಮತಿ ರಾಣಿ ಭಟ್ ಅವಳ ಸ್ವಾಗತ ಗೀತೆ ಮುಗಿದರೂ, ನನಗೆ ಅವಳು ನನ್ನ ಸಹಪಾಠಿಯೋ ಅಲ್ಲವೋ ಎಂಬುದನ್ನು ನಿರ್ಧರಿಸಲಾಗಲಿಲ್ಲ: ಸುಮಾರು ಎರಡೂವರೆ ದಶಕಗಳೇ ಕಳೆದಿದ್ದವ‌ಲ್ಲ‌ ಅವಳನ್ನು ಕೊನೆಯದಾಗಿ ಭೆಟ್ಟಿಯಾಗಿ!  ‍

ಕುತೂಹಲ ತಡೆಯ‌ಲಾಗದೇ, ಕಾರ್ಯಕ್ರಮದ‌ ನಂತರ ಚಾ-ಉಪ್ಪಿಟ್ಟಿನ ಸಮಯ‌ದಲ್ಲಿ ಅವಳನ್ನು ಮಾತನಾಡಿಸಲು ಹೋದೆ. ಹತ್ತಿರದಿಂದ‌ ನೋಡಿದಾಗ‌, 'ಒಹ್, ಇವಳೋ, ಅರವತ್ತು-ಎಪ್ಪತ್ತರ‌ ಮುದುಕಿಯಂತೆ ಕಾಣಿಸುತ್ತಿದ್ದಾಳೆ, ನನ್ನ‌ ಸಹಪಾಠಿ ಇರಲಿಕ್ಕಿಲ್ಲ‌' ಎಂದು ಅನಿಸಿತು (ನಾನು ನಲವತ್ತರ ದಶಕಕ್ಕೆ ಕಾಲಿಟ್ಟು ಬಹಳ ಸಮಯವಾಗಿಲ್ಲ‌).

'ನಮಸ್ಕಾರ‌, ನನ್ನ‌ ಹೆಸರು ಶಿವರಾಮ ಶಾಸ್ತ್ರೀ ಎಂದು; ಅಂದ ಹಾಗೆ, ನೀವು ಕಲಿತದ್ದು ಹೊನ್ನಾವರದ ಹತ್ತಿರದ ಶ್ರೀ ಕರಿಕಾನ ಪರಮೇಶ್ವರಿ ಹೈ ಸೂಲಿನಲ್ಲಾ?' ಎಂದು ಕೇಳಿಯೇ ಬಿಟ್ಟೆ. ಸ್ವಲ್ಪ ಆಶ್ಚ‌ರ್ಯಚಕಿತಳಾದ ಅವಳು, 'ಹೌದು, ಆದರದು ನಿಮಗೆ ಹೇಗೆ ಗೊತ್ತು?' ಎಂದು ಕೇಳಿ ಮುಗುಳ್ನಗೆ ಬೀರಿದಳು. ಆ ಮುಗುಳ್ನಗೆಯಿಂದ‌ ನನಗೆ ಖಾತ್ರಿಯಾಯ್ತು ಇವಳು ನನ್ನ ಸಹಪಾಠಿ ರಾಣಿ ಭಟ್ ಎಂದು. ಜೊತೆಗೇ ನಾನಂದುಕೊಂಡೆ, 'ಇವಳನ್ನು ನೋಡು, ಎಷ್ಟು ಮುದುಕಿಯಾಗಿ ಬಿಟ್ಟಿದ್ದಾಳೆ!' 

ನಾನಂದೆ, 'ರಾಣೀ, ನೀ ನನ್ನ ಕ್ಲಾಸಿನಲ್ಲಿದ್ದೆ.' ಸ್ವಲ್ಪ‌ ಯೋಚಿಸಿ, ಅವಳಂದಳು, 'ಸರ್, ನೀವು ಯಾವ ವಿಷಯ ಹೇಳೀ ಕೊಡುತ್ತಿದ್ದಿರಿ ಎಂದು ನೆನಪಾಗುತ್ತಿಲ್ಲ‌ ...'   

(ಟೈಮ್ಸ್ ಆಫ್ ಇಂಡಿಯಾದಲ್ಲಿ ಬಂದ ನಗೆಹನಿ ಆಧಾರಿತ‌) 

  

    ‍ 

 

 

 

  

 

Comments

Submitted by bhalle Sat, 01/04/2014 - 19:31

ಇದು ಖಂಡಿತ ಜೋಕ್' ಅಲ್ಲ ಶಾಸ್ತ್ರಿಗಳೇ!
ವಾಸ್ತವಕ್ಕೆ ಹಿಡಿದ ಕನ್ನಡಿ. ಚೆನ್ನಾಗಿದೆ.