ನನಗಾಗಿ ಒಂದು ವೃಕ್ಷ ನೆಡುವಿರಾ, ಪ್ಲೀಸ್?

ನನಗಾಗಿ ಒಂದು ವೃಕ್ಷ ನೆಡುವಿರಾ, ಪ್ಲೀಸ್?

ಬರಹ

ಕೋಪನ್ ಹೇಗನ್ ನಲ್ಲಿ ಜಾತ್ರೆ. ನಿಸರ್ಗ ದೇವಿ ಮುನಿಸಿಕೊಂಡಿದ್ದಾಳೆ ಎಂದು ವಿಶ್ವದ ನಾಯಕರು ಸಭೆ ನಡೆಸಿ ಕಾರ್ಬೋನ್  emission ಬಗ್ಗೆ ಏನಾದರೂ ಮಾಡಲು ಉತ್ಸುಕರಾಗಿದ್ದಾರೆ. ಆದರೆ ದೇವಿಯನ್ನು ಒಲಿಸಿಕೊಳ್ಳಲು ಯಾರನ್ನಾದರೂ ಬಲಿ ಕೊಡಬೇಕಲ್ಲ? ಈಗ ಎಲ್ಲರ ಕಣ್ಣು bric ರಾಷ್ಟ್ರಗಳ ಮೇಲೆ. brazil, russia, india, china. ಈ ರಾಷ್ಟ್ರಗಳು ಈಗ ಅಭಿವೃದ್ಧಿಯತ್ತ ದಾಪುಗಾಲು ಹಾಕುತ್ತಿರುವುವು. ಅದನ್ನು ನೋಡಿ ಶ್ರೀಮಂತ ರಾಷ್ಟ್ರಗಳಿಗೆ ಕಣ್ಣುರಿ. ಇಂಗಾಲದ di oxide ಆಗಸಕ್ಕೆ ತುಂಬಿದ್ದೆ ಈ ಸಿರಿವಂತ ರಾಷ್ಟ್ರಗಳು, ಅದರಲ್ಲೂ ಅಮೇರಿಕ. ಅಮೇರಿಕ ಶೇಕಡಾ ೭೦ ಇಂಗಾಲವನ್ನು ಬಿಡುತ್ತದಂತೆ. ಇಂಗಾಲದ ಕಡಿತದ ಮಾತು ಬಂದಾಗ ಅಮೇರಿಕ ಒಪ್ಪಿದ್ದು ಶೇಕಡಾ ೧೭ ಕಡಿತಕ್ಕೆ. ಹೇಗಿದೆ ನ್ಯಾಯ?


ನೂರಾರು ವರ್ಷಗಳಿಂದ ಒಂದೇಸಮನೆ ಕೈಗಾರೀಕರಣದ ಪರಿಣಾಮ ವಿಷಾನಿಲವನ್ನು ಅಂತರಿಕ್ಷಕ್ಕೆ ಬಿಟ್ಟು ಶ್ರೀಮಂತಗೊಂಡ ರಾಷ್ಟ್ರಗಳಿಗೆ ಬೆಳಗಾಗಿದ್ದು ಈಗ. ಏಕಾಏಕಿ ಅರ್ಕ್ಟಿಕ್ (arctic) ನಲ್ಲಿ ಮಂಜು ಕರಗಲು ಶುರುವಾಗುತ್ತದೆ ಮತ್ತು ಹೀಗೆ ಹೋದರೆ ಋತುಮಾನದಲ್ಲಿ ಏರುಪೆರುನ್ಟಾಗಿ ದೊಡ್ಡ ಗಂಡಾಂತರ ಎದುರಾಗುತ್ತದೆ ಎನ್ನುವ ಭಯ ಆವರಿಸಿದೆ. ಅಮೆರಿಕೆಯಲ್ಲಿ ಬಂದೆರಗಿದ ಕತ್ರೀನಾ, ಎಲ್-ನಿನೋ ಚಂಡಮಾರುತ, ಏಷ್ಯಾ, ಆಫ್ರಿಕಾವನ್ನು ಬಾಧಿಸಿದ  ಸುನಾಮಿ ಹೀಗೆ ಹಲವು ನೈಸರ್ಗಿಕ ದುರಂತಗಳು ಬೇಕಾದವು ಪ್ರಕೃತಿಯ ಬಗ್ಗೆ ಗಮನ ಹರಿಸಲು. ಮೊದಲು ತಮ್ಮ ಹಿತ್ತಲಿನಿಂದ ಹೊರಡುವ ವಿಷಾನಿಲದ ಬಗ್ಗೆ ಶ್ರೀಮಂತ ರಾಷ್ಟ್ರಗಳು ಗಮನ ಹರಿಸಲಿ. bric ರಾಷ್ಟ್ರಗಳು ಅಭಿವೃದ್ಧಿಯತ್ತ ಸಾಗುತ್ತಿದ್ದರೂ GDP ಮೇಲೆ ಗಮನಾರ್ಹ ಬದಲಾವಣೆ ಏನೂ ಕಂಡಿಲ್ಲ.


 ನಾವು ಈ ರೀತಿ ಭಯ ಬಿದ್ದು ನಿಸರ್ಗದ ಬಗ್ಗೆ ಮಾತನಾಡಲು ಕಾರಣವಾಗಿದ್ದೂ ನಮ್ಮ ಪಾಶ್ಚ್ಯಾತ್ಯರ ದುರಾಸೆಯ ಬದುಕಲ್ಲವೇ. ಕಣ್ಣಿಗೆ ಕಂಡದ್ದೆಲ್ಲಾ, ಬೇಡದ್ದೆಲ್ಲಾ ಬೇಕು. ಅಮೇರಿಕ ಒಂದು ವರ್ಷಕ್ಕೆ ಚೀನಾದಿಂದ ಆಮದು ಮಾಡುವ ಆಟಿಕೆಗಳನ್ನೂ, ಸೌಂದರ್ಯ ಪ್ರಾಸಾಧನಗಳ ಬಳಕೆಯನ್ನೂ, ಆಹಾರ ಪದಾರ್ಥಗಳನ್ನೂ ನೋಡಿದರೆ ತಿಳಿಯುತ್ತದೆ ಯಾವ ರೀತಿ ನಿಸರ್ಗ ದ ಮೇಲೆ ಅವ್ಯಾಹತ ಧಾಳಿ ನಡೆಸಲಾಗುತ್ತಿದೆ ಎಂದು. ಬಹಳಷ್ಟು ಉತ್ಪಾದನೆಗಳಿಗೆ ಅವಶ್ಯಕತೆಗಿಂತ ಹೆಚ್ಚು ಪ್ಯಾಕೇಜು, ಸಾರಾಸಗಟು ರಾಸಾಯನಿಕ ವಸ್ತುಗಳ ಬಳಕೆ, ಪ್ಲಾಸ್ಟಿಕ್ ಗಳ ಮೇಲೆ ವಿಪರೀತ ಅವಲಂಬನೆ ಇವು ಕಾರಣವಾದವು ನಿಸರ್ಗ ದ ಸಮತೋಲನ ತಪ್ಪಿಸಲು. ಕಳೆದ ಐವತ್ತು ವರ್ಷಗಳಲ್ಲಿ ೮೦,೦೦೦ ಕ್ಕೂ ಹೆಚ್ಚು ನಮೂನೆಯ ರಾಸಾಯನಿಕಗಳನ್ನು ಉತ್ಪಾದಿಸಿ ವಾಯುಮಾಲಿನ್ಯಕ್ಕೆ ಮಹತ್ತರ ಕೊಡುಗೆ ನೀಡಿದ್ದು ಬಿಳಿಯರು. 


 ಐವತ್ತೋ, ನೂರೋ ಜೆಟ್ ವಿಮಾನಗಳಿಗೆ ಆರ್ಡರ್ ಕೊಡಿ ಮತ್ತು ನೋಡಿ ಹೇಗೆ ಅಮೇರಿಕಾ ಕುಣಿದು ನಿಮ್ಮ ಬೇಡಿಕೆಯನ್ನು ಪೂರ್ತಿಗೊಳಿಸುತ್ತದೆ ಎಂದು. ತನ್ನ ಆಯುಧಗಳ ಉತ್ಪಾದನೆ ಮಾಡಿಯೇ ನಿಸರ್ಗದ ಸ್ಥಿತಿಯನ್ನು ಈ ಮಟ್ಟಕ್ಕೆ ಅಮೇರಿಕ ಮತ್ತು ಇತರೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ತಂದು ನಿಲ್ಲಿಸಿದ್ದು. ಈ ಆಯುಧಗಳನ್ನು ಖರೀದಿಸಿ ಓರ್ವ ಸರ್ವಾಧಿಕಾರಿ ತನ್ನವರೇ ಆದ ಪ್ರಜೆಗಳನ್ನು ಕೊಂದರೂ, ಮತ್ತೊಂದು ರಾಷ್ಟ್ರಗಳ ಮೇಲೆ ಧಾಳಿ ಮಾಡಿದರೂ ಅದ್ಯಾವುದೂ ಈ ರಾಷ್ಟ್ರಗಳಿಗೆ ದೊಡ್ಡ ವಿಷಯವಲ್ಲ. ಅವರ ಉತ್ಪಾದನೆಗಳಿಗೆ ಪೇಮೆಂಟ್ ಮಾಡಿ ಬಿಟ್ಟರೆ ಸಾಕು.  ಇಂಗಾಲದ ಬಗ್ಗೆ ಮಾತನಾಡಿ ನಮ್ಮ ಮೇಲೆ ಒತ್ತಡ ಹೇರಲು ಅಮೇರಿಕ ಮತ್ತು ಇತರೆ ರಾಷ್ಟ್ರಗಳು ಹವಣಿಸಿದರೆ ನಮ್ಮ ನಾಯಕರು ಸ್ಪಷ್ಟವಾಗಿ ಹೇಳಬೇಕು, ಮೊದಲು ನಿಮ್ಮ ಹಿತ್ತಲನ್ನು ಶುಚಿ ಮಾಡಿ ನಂತರ ನಮ್ಮ ಕಡೆ ಗಮನ ಕೊಡಿ ಎಂದು. ನಾವು ಕಾಡು ಬೆಳೆಸಿ ಮರಳಿ ಶಿಲಾ ಯುಗಕ್ಕೆ ಹೋಗಿ ಬದುಕುತ್ತೇವೆ ಎಂದು ಕನಸು ಕಾಣುವುದು ಬೇಡ.


"charity begins at home". ಇದು ಬಿಳಿಯರ ನಾಣ್ಣುಡಿ. ಅದರಂತೆ ನಡೆದು ವಿಶ್ವದ ಇತರೆ ರಾಷ್ಟ್ರಗಳಿಗೆ ಉಪದೇಶ ನೀಡಲಿ. ನಮಗೆ ವೃಕ್ಷಗಳನ್ನು ನೆಡಲು ಹೇಳಿ ಇನ್ನಷ್ಟು ಕ್ಷಿಪಣಿ, ಬಾಂಬುಗಳನ್ನು  ಉತ್ಪಾದಿಸುವ ಕಾರ್ಖಾನೆಗಳನ್ನು ತೆರೆದು ಮತ್ತಷ್ಟು ಸಂಪತ್ತು ಗುಡ್ಡೆ ಹಾಕುವುದು ಬೇಡ. 


 ಕೋಪನ್ ಹೇಗನ್ ಸಮ್ಮೇಳನದ ಹಿನ್ನೆಲೆಯಲ್ಲೇ ಅಮೆರಿಕೆಯ ಸೇನಾ ದಂಡಾಧಿಕಾರಿಯೊಬ್ಬ ಅರಬರಿಗೆ ಶಸ್ತ್ರಗಳನ್ನು ಮಾರಲು ಈ ಪ್ರದೇಶಕ್ಕೆ ಬಂದಿದ್ದಾನೆ. ನಮ್ಮಿಂದ UAE ರಾಷ್ಟ್ರ ಸಾಕಷ್ಟು ಆಯುಧಗಳನ್ನೂ, ಹೋರಾಟ ವಿಮಾನಗಳನ್ನೂ ಕೊಂಡಿದೆ, ಅವರ (UAE) ವಿಮಾನ ಪಡೆ ಇರಾನಿನ (ಅಮೆರಿಕೆಯ ಶತ್ರು) ಇರಾನಿನ ವಿಮಾನ ಪಡೆಯನ್ನು ಸಂಪೂರ್ಣವಾಗಿ ನಾಶ ಪಡಿಸಬಲ್ಲುದು ಎಂದು ಇತರೆ ಅರಬ್ ರಾಷ್ಟ್ರಗಳ ಬಾಯಲ್ಲಿ ಜೊಳ್ಳು ಬರಿಸಿ ತನ್ನ ಜೇಬನ್ನು ತುಂಬಿಸಿಕೊಳ್ಳುವ ಹವಣಿಕೆಯಲ್ಲಿ ಇಲ್ಲಿನ ನಾಯಕರುಗಳನ್ನು ಭೇಟಿಯಾಗುತ್ತಿದ್ದಾನೆ. ವಿಪರ್ಯಾಸ ನೋಡಿ, ಒಂದು ಕಡೆ ಕಾರ್ಖಾನೆಗಳನ್ನು ಆರಂಬಿಸಬೇಡಿ, ಮರ ನೆಡಿ ಎಂದು ಉಪದೇಶ,  ಮತ್ತೊಂದು ಕಡೆ ತನ್ನ ಶಾಸ್ತ್ರಗಳನ್ನು ಮಾರಲು ಕಾತುರ, ಆಸಕ್ತಿ.  


ಈ ದ್ವಿಪಾತ್ರಾಭಿನಯದ ಕೌಶಲ್ಯದಿಂದಲೇ ಇಂದು ಅಮೇರಿಕ ವಿಶ್ವಕ್ಕೆ ಪೆಡಂಭೂತವಾಗಿ ಕಾಡುತ್ತಿರುವುದು. ಕಾರ್ಬನ್ ( ಇಂಗಾಲ ) ಪ್ರಾಬ್ಲಮ್ಮು ಬಿಳಿಯನದು. ಅವನೇ ಸರಿಪಡಿಸಲಿ ಅದನ್ನು. ತನ್ನ ಹಿತ್ತಲನ್ನು ಶುಚಿಗೊಳಿಸಿ ಬರಲಿ ನಮ್ಮ ಬಳಿ.  


ಕೋಪನ್ ಹೇಗನ್ ನಲ್ಲಿ ನಿಸರ್ಗ ಪ್ರೇಮಿಗಳ ಪ್ರತಿಭಟನೆ ಸಮಯ ಕೇಳಿಬಂದ ಮಾತುಗಳು.  ನೈಜೀರಿಯ ದೇಶದ ನಿಮ್ಮೋ ಬಸ್ಸಿ friends of the earth international ಸಂಘಟನೆಯ ಅಧ್ಯಕ್ಷ.  ಆತ  ಹೇಳಿದ್ದು.


"we cannot allow carbon traders to damage the world. there is no such thing as clean coal or clean crude. leave the oil in the soil and leave the coal in the hole


 " to those who want to pollute at home and plant a tree somewhere we say no". 


ಎಷ್ಟು   ಮಾರ್ಮಿಕ ಮತ್ತು ಅರ್ಥಗರ್ಭಿತ ಅವರ ಮಾತುಗಳು. ಸಂಪತ್ತಿನ ಬಲದಿಂದ ಕುರುಡು ಮತ್ತು ಕಿವುಡಾದ ಬಿಳಿಯನಿಗೆ ಕೇಳಿಸೀತೆ ನೈಜೀರಿಯಾ ದೇಶದ ಬಡವನ ಆಕ್ರಂದನ?