ನನಗೆ ಅನುಮಾನ ಬರುತ್ತಿದೆ
ಕವನ
ನನಗೆ ಅನುಮಾನ ಬರುತ್ತಿದೆ
ಇಂದು ಸ್ವಾತಂತ್ರ್ಯೋತ್ಸವದ ದಿನ?!
ವಿಚಾರ ಮಾಡಿದರೆ,
ಯಾಕೋ ವಿಡಂಬನೆ ಎನಿಸುತ್ತೆ …
ಹೌದು, ಅದು ನಾವು
ಪುಕ್ಕಟ್ಟೆಯಾಗಿ ಪಡೆದು ಕೊಂಡದ್ದಲ್ಲ,
ಗಳಿಸಿಕೊಂಡದ್ದು.
ಆದರೆ ಉಳಿಸಿಕೊಂಡಿದ್ದೆವೆಯ ಎನ್ನುವ
ಪ್ರಶ್ನೆಯ ಚೂರಿ,
ಮುಗ್ದ ನಾಗರೀಕನ ಎದೆಯೊಳಗೊಮ್ಮೆ, ಹಣೆಬರಹಕೊಮ್ಮೆ
ಗೀರಿ ಗೀರಿ ನೆತ್ತರ ಮುಟ್ಟಿ ಗಹಗಹಿಸುತ್ತೆ.
ಅಪರಿಚಿತ ವಿದೇಶಿಗಳ
ಅತ್ಯಾಚಾರದಿಂದ ಮುಕ್ತಿ ಕೊಡಿಸಿದ ತಾಯಿಗೆ
ಮಕ್ಕಳೇ, ಹೌದು ಅವಳ ಮಕ್ಕಳೇ
ಶೀಲಹರಣ ಮಾಡುವುದನು ನೋಡುವ ದುರ್ದಿನ.
ಆಚರಿಸಿ, ಬಂಧು ಭಗಿನಿಯರೆ ಆಚರಿಸಿ.
ಆದರೆ,
ಇನ್ ಕಿಲಾಬ್ ಜಿಂದಾಬಾದ್ ಎಂದು,
ಒಂದೇ ಮಾತರಂ ಎಂದು,
ಭಾರತ್ ಮಾತಾ ಕೀ ಜೈ ಎಂದು
ಹಾರಿಸಿದ ಈ ಧ್ವಜ
ನಾವು ಸ್ವತಂತ್ರವಾಗಿದಕ್ಕೋ
ಅಥವಾ ಇಂದು ಮತ್ತೊಮ್ಮೆ ಕಳೆದುಕೊಂಡಿದಕ್ಕೋ
ಎಂದು ನನಗೆ ಅನುಮಾನ ಬರುತ್ತಿದೆ ….
ರಾಜೇಂದ್ರಕುಮಾರ್ ರಾಯಕೋಡಿ - Copyright©
Comments
ಉ: ನನಗೆ ಅನುಮಾನ ಬರುತ್ತಿದೆ
In reply to ಉ: ನನಗೆ ಅನುಮಾನ ಬರುತ್ತಿದೆ by jaikissan
ಉ: ನನಗೆ ಅನುಮಾನ ಬರುತ್ತಿದೆ
ಉ: ನನಗೆ ಅನುಮಾನ ಬರುತ್ತಿದೆ
In reply to ಉ: ನನಗೆ ಅನುಮಾನ ಬರುತ್ತಿದೆ by veena wadki
ಉ: ನನಗೆ ಅನುಮಾನ ಬರುತ್ತಿದೆ