ನನಗೊಂದು ಹೆಣ್ಣು ಬೇಕು ಅವಳು ಈ(ಹೀ)ಗಿರಬೇಕು
"ನನಗೊಂದು ಹೆಣ್ಣು ಬೇಕು
ಅವಳು ಈಗಿರಬೇಕು(ಹೀಗಿರಬೇಕು)"
ಮನದ ಮೃದಂಗ ನುಡಿಸಿ
ಎದೆಯಲ್ಲಿ ಪ್ರೇಮರಾಗ ಮಿಡಿವಂತೆ
ಮಾಡುವ ಮುಗ್ದ ಮುದ್ದು ಹೆಣ್ಣೊಂದು ಬೇಕು
ಅಂದಕಾರದ ಬದುಕಿಗೆ ಬೆಳಕಾಗಬಲ್ಲ
ಅರಿವಿನ ಅ(ಹ)ರಿಣಿ ಅವಳಾಗಬೇಕು
ಜೀವಕ್ಕೆ ಉಸಿರು-ಹಸಿರಾಗ ಬಯಸುವ
ಚೈತ್ರ ಚಲುವ ಹೆಣ್ಣಾಗಿರಬೇಕು
ಬರಡಾದ ಬದುಕಿಗೆ ಜೀವಕಳೆಯ
ತುಂಬಬಲ್ಲ ಹೆಣ್ಣು ಅವಳಾಗಬೇಕು
ಬತ್ತಿದೆದೆಯಲ್ಲಿ ಬರವಸೆಯ ಜಲವ
ತುಂಬುವಂತಹ ತರುಣಿ ಅವಳಾಗಬೇಕು
ಮನದ ಮೌನ ಮುರಿದು ಜೀವದಲಿ
ಹೊಸಕಳೆಯ ತರಬಲ್ಲ ಹುಡುಗಿಯಾಗಬೇಕು
ಮನದ ಬಾವ ಅರಿತು ನಡೆವ ನುಡಿವ
ನವ ತರುಣಿಮಣಿ ಅವಳಾಗಬೇಕು
ಮನದ ಹಸಿವು-ದಾಹಗಳ ಅರಿತು
ತೀರಿಸ ಬಲ್ಲ ಹೆಣ್ಣು ಅವಳಾಗಲುಬೇಕು
ವನಪು ವಯ್ಯಾರ ಮರೆತಿರಬೇಕು
ಒಲವು-ಛಲವು ಜೊತೆಗಿದ್ದರೆ ಸಾಕು
ಬೆಳ್ಳಿಗೆಜ್ಜೆ ಯಾರಿಗೆ ಬೇಕು
ಒಳ್ಳೆ ಲಜ್ಜೆ ಅವಳಿಗಿದ್ದರೆ ಸಾಕು
ಮುತ್ತು ರತ್ನ ಯಾರಿಗೆ ಬೇಕು
ಮುಗುಳ್ನಗೆ ಸದಾಇರಲಿ ಸಾಕು
ಸಿರಿ ಸಂಪತ್ತು ಯಾಕೆ ಬೇಕು
ಸನ್ನಡತೆಯಲಿ ಎನ್ನ ಪ್ರೀತಿಸುತಿರೆ ಸಾಕು
-ವಿ ಕೃಷ್ಣಮೊರ್ತಿ ಬಿ ಎಂ ಎಸ್ ಸಿ ಇ