ನನ್ನಪ್ಪ

ನನ್ನಪ್ಪ

ಕವನ

ಅವನ ಹಣೆಯ ಮೇಲೆ ಮೂಡಿದ

ಮುತ್ತುಗಳು ನನಗೆ ಕೂಳಾಯಿತು ||

 

ಬಟ್ಟೆ ಹರಿದರು ಯೋಚಿಸದೆ ನನ್ನ

ಆಸೆಗಳಿಗೆ ಆಗಸವಾದನು ನನ್ನಪ್ಪ,

ಮುಂಜಾನೆ ಸೂರ್ಯನುದಯಿಸುವ

ಮೊದಲೇ ಕೆಲಸದ ಹಾದಿಹಿಡಿವನು

ಕಳೆದ ದಿನದ ಆಯಾಸವನ್ನು ಮರೆತು;

ಇಳೆಯೊಳಗೆ ಅರ್ಕನು ಮರೆಯಾಗುವ

ಗಳಿಗೆಯನ್ನೆ ಕಾಯುತ್ತಿದ್ದೆನು ನನ್ನಪ್ಪನ

ಹೆಜ್ಜೆ ಸಪ್ಪಳಕ್ಕೆ;

ಮನದಲ್ಲಿ ಮೂಡುತ್ತಿದ್ದ ನೂರಾರು

ಪ್ರಶ್ನೆಗಳಿಗೆ, ನಗುತ್ತಾ ಉತ್ತರ

ನೀಡುತ್ತಿದ್ದನು ಬೆಳದಿಂಗಳಿನಾಗೆ,

ನನ್ನ ತುಂಟಾಟಕ್ಕೆ ಅದೆಷ್ಟೋ

ಕಡ್ಡಿಗಳು ತುಂಡಾದರೂ ಮತ್ತೆ

ಮೊಗದಲ್ಲಿ ನಗು ಮೂಡಿಸುತ್ತಿದ್ದರು

ಕ್ಷಣಾರ್ಧದಲ್ಲೇ ;

ಮನಸ್ಸಿಗೆ ಧೈರ್ಯ ತುಂಬುವುದರಲ್ಲಿ

ಚಾಣಾಕ್ಷಣ ಪ್ರತಿರೂಪ ನನ್ನಪ್ಪ;

ಇಷ್ಟೆಲ್ಲಾ ಕಲಿಸಿದ ಮುಗ್ಧ

ಮನಸ್ಸನ್ನು ಅಪ್ಪಾ ಎನ್ನಲು

ಏನೋ ಹರುಷ ತರುವುದು ಮನಸಿಗೆ...

-ಸಹನ. ಆರ್. ಎಂ

ಚಿತ್ರ ಕೃಪೆ: ಇಂಟರ್ನೆಟ್ ತಾಣ

 

ಚಿತ್ರ್