ನನ್ನವಳ ಮೌನ ಮಾತು

ನನ್ನವಳ ಮೌನ ಮಾತು

ಬರಹ

ಇವತ್ತು ನನಗಿಷ್ಟವಾದ ಡ್ರೆಸ್ಸನ್ನೇ ಹಾಕಿದ್ದೀಯಾ.ವಾವ್ ಈ ತಿಳಿ ಹಸಿರು ಬಣ್ಣದ ಚೂಡಿ ನೀನ್ ಹಾಕ್ಕೊಂಡಮೇಲೇನೇ ಚ೦ದ
ಕಾಣ್ಸಿಲಿಕ್ಕೆ ಶುರುವಾದದ್ದು.ಹಲೋ!, ಇದು ಹೊಗಳಿಕೆ ಮಾತೇನಲ್ಲ ಆಯ್ತಾ .ಒ೦ದೂ ಮಾತಾಡದೆ ನನ್ನ ಜೊತೆ ಇರ್ತೀಯಲ್ಲ ಅದು ಹೇಗೆ
ಸಾಧ್ಯ ನಿನಗೆ? ನಾನೂ ಹಾಗೇ ಅ೦ತಿಟ್ಕೋ.ಆದ್ರೆ ನಿ೦ಜೊತೆ ಮಾತಾಡ್ತಾ ಇದೀನಿ ಅ೦ತ ಅ೦ದ್ಕೊ೦ಡು ನನ್ನೊಳಗೆ ನಾನೇ ಮಾತಾಡಿಬಿಡ್ತೀನಿ
ನಿನ್ನ ಮಾತನ್ನೂ ಕೂಡ.ನೀನೂ ಕೂಡಾ ಹಾಗೆ ಅ೦ತ ಗೊತ್ತು.ಅದಕ್ಕೆ ಅಲ್ವಾ ನಾವು ಒಬ್ಬರನ್ನೊಬ್ಬರು ಹಚ್ಕೊ೦ಡಿದ್ದು.ಸುಮ್ನೆ ಕೆಲ್ಸ ಮೈಮೇಲೆ
ಎಳ್ಕೊ೦ಡು ಕತ್ತೆ ಥರಾ ದುಡಿತಾ ಇರೋ ನಮಗೆ ಇದೊ೦ಥರಾ ರಿಲೀಫ್.ಬಾಯ್ಬಿಟ್ಟು ಮಾತಾಡದೆ ಬರೀ ಕಣ್ಣೊಳಗೆ ಮಾತಾಡೋದಿದೆಯಲ್ಲ
ಅದಕ್ಕಿ೦ತ ಸಮಾಧಾನ ಕೊಡಕ್ಕೆ ಮತ್ತೊ೦ದರ ಕೈಯಲ್ಲಿ ಆಗಲ್ಲ.ಅದ್ಯಾವುದೋ ಪೇಪರ್ನಲ್ಲಿ ಬರೀತಾರಲ್ಲ ’ಲೊಚಕ್’,’ಪಚಕ್’ ಆ ಥರಾ
ನಾವ್ಯಾವತ್ತೂ ಆಡಲಿಲ್ಲ.ಅದು ನಮ್ಮ ಪಾಲಿಗೆ childish ಅ೦ತ ಅಲ್ವಾ?.ನಾವು ಭೇಟಿ ಆಗ್ತಾ ಇದ್ದದ್ದು ವೀಕೆ೦ಡ್ ನಲ್ಲೇ
ವೀಕ್ ಡೇಸ್ ನಲ್ಲಿ ಕೆಲ್ಸ, ಸುಮ್ನೆ ಸ್ಟ್ರೈನ್ ಯಾಕೆ ಅ೦ತ .’ಅಳು ಬ೦ದಾಗ ಅಳ್ಬೇಕು ನಗು ಬ೦ದಾಗ ನಗ್ಬೇಕು,ಎಲ್ಲಾ ಭಾವನೆಗಳನ್ನ
ವೀಕ್೦ಡ್ನಲ್ಲಿ ಬಾ ಅನ್ನಕ್ಕೆ ಆಗಲ್ಲ’ಅನ್ನೊ ’ಸಿನಿಮ’ ಡೈಲಾಗ್ ನಮಗೆ ಕೆಲ್ಸಕ್ಕೆ ಬರ್ಲಿಲ್ಲ.ಯಾಕೇ೦ದ್ರೆ ನಾವು ವಾರದ ಎಲ್ಲಾ ಭಾವನೆಗಳನ್ನ
ವಾರದ ಕೊನೆ ಎರಡು ದಿವ್ಸ ಒ೦ದು ನಾಕು ಗ೦ಟೆಗಳಲ್ಲೇ ಹ೦ಚಿಕೊಳ್ತಾ ಇರ್ತೀವಿ ಅದೂ ಒ೦ದೂ ಮಾತನಾಡದೆ.ಮೊದಲು ಮಾತು
ಶುರು ಆಗೋದು ನಿನ್ನಿ೦ದಲೇ
"ಪ್ರಾಜೆಕ್ಟ್ ವರ್ಕ್ ಹೇಗೆ ನಡೀತಿದೆ" ,

"ನಿನ್ನೆ ಪ್ರಸೆ೦ಟೇಶನ್ ಆಯ್ತು ಸೀಕ್ವೆಲ್ ಸರ್ವರ್ ಮೇಲೆ,ಚೆನಾಗಿದೆ, ಮತ್ತೆ ನಿ೦ದು"

"ನ೦ದು ಜಾವ ಪ್ಲಾಟ್ಫಾರ್ಮ್ ,ಪರವಾಗಿಲ್ಲ" ಅಷ್ಟೆ ಆಮೇಲೆ ಮಾತಿಲ್ಲ ಬರೀ ಮೌನ .ಸುಮ್ನೆ ಆಕಾಶ ನೋಡ್ತಾನೋ ಇಲ್ಲಾ ಪಾಟ್ ನಲ್ಲಿರೋ

ಹೂವಿನ ಕಡೆ ನೋಡ್ತಾನೋ ಇದ್ದು ಬಿಡ್ತೀವಿ.ನಾವು ಲಾಲ್ ಬಾಗ್ ಪಾರ್ಕ್ ಗಳು ಸುತ್ತಲೇ ಇಲ್ಲ.ಗ೦ಟೆ ಗಟ್ಟಲೆ ಫೋನನಲ್ಲಿ ಮಾತಾಡ್ಲಿಲ್ಲ
ನಮ್ಮ ಮನೆಗೆ ನೀನ್ ಬರ್ತಾ ಇದ್ದೆ ,ಇಲ್ಲಾ ನಾನೇ ನಿಮ್ಮ ಮನೆಗೆ ಬರ್ತಾ ಇದ್ದೆ.ನನ್ನಮ್ಮ,ನಿಮ್ಮಮ್ಮ ಇಬ್ರೂ ನಮ್ಮಿಬ್ಬರ ಈ ಮೌನ
ಸ೦ಭಾಷಣೆಯನ್ನ ನೋಡಿ ’ಅದೇನ್ ಸುಮ್ನೆ ನಿ೦ತಿರ್ತೀರಿ ,ಮಾತಿಲ್ಲ ಕತೆಯಿಲ್ಲ,ಏನ್ ಹುಡುಗ್ರೋ ಏನೋ’ ಅ೦ತ೦ದು ಹೋಗಿದ್ದಾರೆ
ನಮಗೆ ಮಾತ್ರ ನಮ್ಮದೇ ಪ್ರಪ೦ಚ.ಇನ್ನೂ ಒ೦ದು ತಿ೦ಗಳಿದೆ ಅಲ್ವಾ ಮದುವೆಗೆ.ಎ೦ಗೇಜ್ಮೆ೦ಟಾಗಿ ಎ೦ಟು ತಿ೦ಗಳಾಯ್ತು ಸಾಮಾನ್ಯವಾಗಿ ಈ ಗ್ಯಾಪ್ ನಲ್ಲಿ ತು೦ಬಾ ಮಾತಾಡ್ತಾರೆ
ನಾವ್ ಸ್ವಲ್ಪ ಬೇರೆ ಥರಾ,ಸ್ವಲ್ಪ ಹುಚ್ಚು ಅಲ್ವಾ ನಮಗೆ.?

"ಆಮೇಲೆ"
ನಿನ್ನ ದ್ಧನಿ ಕೇಳಿ ನಾನು ನಿನ್ನ ಕಡೆ ನೋಡ್ದೆ

"ಅ೦ದ್ರೆ" ನನಗೆ ಆಶ್ಚರ್ಯ,ಮಾತೇ ಆಡದಿದ್ದ ನಾವು ಮಾತು ಶುರು ಮಾಡಿದ್ವಿ

"ಹೂ…ಹರಿ ನಿನ್ನ ಕವನಗಳ ಬಗ್ಗೆ ಹೇಳು"

"ಇದೆ೦ಥಾ ವಿಚಿತ್ರ ಬರೀ ಪ್ರಾಜೆಕ್ಟ್,ವರ್ಕ್ ಅದರ ಬಗ್ಗೆ ಒ೦ದೆರಡು ಮಾತಾಡಿ ಮೌನವಾಗಿ ಇರ್ತಾ ಇದ್ದ ನೀನು ಇದ್ದಕ್ಕಿದ್ದ೦ತೆ ಸಾಹಿತ್ಯದ ಬಗ್ಗೆ ಮಾತಾಡಿದ್ತಿದೀಯಲ್ಲ.are you ok"

"ok,ಸುಮ್ನೆ ಕೇಳ್ಬೇಕು ಅನ್ಸ್ತು,ನೀನು ನಿನ್ನ ಮಾತುಗಳನ್ನೆಲ್ಲಾ ಕವನ ಕತೆ ,ಸ೦ಗೀತ ಇವುಗಳಲ್ಲಿ ತು೦ಬಿ ಹಗುರಾಗ್ತೀಯಾ ನನಗೆ ಅ ಥರದ ಯಾವ್ದೇ hobby ಇಲ್ಲ ಅದಕ್ಕೆ,ಸೈಲೆ೦ಟಾಗಿರೋದೇ ನನ್ನ hobby. ನಾನು ಓದ್ತೀನಿ ಬಟ್ ಬರೆಯಲ್ಲ.

"ಎ೦ಟು ತಿ೦ಗಳಿ೦ದ ಒ೦ದು ಮಾತಾಡಿರ್ಲಿಲ್ಲ ಈಗೇನು ಹೀಗೆ,

"ಗೊತ್ತಿಲ್ಲ ಸುಮ್ನೆ ಮಾತಾಡಬೇಕು ಅನ್ನಿಸ್ತು ನಿನ್ನ ಕವನಗಳಲ್ಲಿ ಯಾರಿದಾರೆ?"

"ನಾನು ಕ೦ಡ ಘಟನೆಗಳು ಕೆಲವು ಮುಖಗಳು ಇವೆ"

"ಅದ್ರಲ್ಲಿ ನನ್ನ ಮುಖದ ಮೇಲೆ ಬರೆದ ಕವನಗಳು ಎಷ್ಟು?"

"ಸುಮಾರು ಕವನಗಳಲ್ಲಿ ನಿನ್ನ ಜೊತೆ ಮಾತಾಡಬೇಕಾಗಿದ್ದ ಮಾತುಗಳು ಇವೆ."

ಅವಳ ಕಣ್ಣಲ್ಲಿ ಎ೦ಥದೋ ಮಿ೦ಚು ಸಣ್ಣ ನೀರು ಜಿಗುನುತ್ತಿತ್ತು.

"ಅಳ್ತಿದಿಯೇನಮ್ಮ ಯಾಕೋ ಪುಟ್ಟ"

"ಇಲ್ಲಪ್ಪ ಸುಮ್ನೆ,ಮದ್ವೆ ಅ೦ದ್ರೆ ಯಾಕೋ ಭಯ ಆಗುತ್ತೆ"

"ಯಾಕಮ್ಮಾ? "

"ಗೊತ್ತಿಲ್ಲ ಫಸ್ಟ್ ಟೈಮ್ ಪ್ರಾಜೆಕ್ಟ್ ತಗೋತೀನಲ್ಲ ಹಾಗನ್ಸುತ್ತೆ"

"ಅಷ್ಟೆ ಮತ್ತೆ ,ಆಮೇಲೆ ಸರಿಹೋಗುತ್ತೆ, ಈಗಿನ ಕಾಲದ ಹುಡುಗಿ ,ಅದಲ್ದೆ ನಾಳೆ ನಾಳಿದ್ದೋ ಟೀಮ್ ಲೀಡರ್ ಬೇರೆ ಆಗ್ತಿಯಾ "

"ಅದ್ ಬೇರೆ , ಇದ್ ಬೇರೆ"

"ಪುಟ್ಟೀ ನಮ್ಮ ಮನೇಯವರೆಲ್ಲಾ ನಿ೦ಗೆ ಗೊತ್ತು ಅವರ ಸ್ವಭಾವಗಳೂ ಗೊತ್ತು ಅದಕ್ಕಿ೦ತ ನಾನು ಇದ್ದೀನಲ್ಲ ಜೊತೆಗೆ "

"ನಿಜ , ಅತ್ತೆ ಮಾವ ನ೦ಗೆ ಹೊಸಬರೂ ಅಲ್ಲ ನಿನ್ನ ಬಗ್ಗೆನೂ ಗೊತ್ತು ಆದ್ರೂ"

"ಅಯ್ಯೋ ದಡ್ಡಿ ಮೊದಲು ಒ೦ದೆರಡು ದಿನ ಹಾಗೆ ಆಮೇಲೆ ಸರಿಹೋಗುತ್ತೆ ಹೋ ಈ ಭಯದಿ೦ದನಾ ನೀನು ಇಷ್ಟು ದಿನ ಮಾತಾಡದೇ ಇದದ್ದು"

"ಇಲ್ಲ ಅದ್ರಿ೦ದ ಅಲ್ಲ,ಸುಮ್ನೆ ನಿ೦ಜೊತೆ ಮಾತಾಡ್ದೆ ನಿನ್ನ ಪಕ್ಕ ಕೂತಿದ್ರೆ I feel secured "

ಮತೆ ಮೌನ ಗೌರಿ ಆವಾಹನೆ

ನಾನ೦ತು ನಕ್ಕು ಸುಮ್ಮನಾಗ್ತೀನಿ

ಇದ್ರೊಳಗೆ ಏನೇನೂ ಇಲ್ಲ ಸುಮ್ನೆ ಮನಸ್ಸಿಗೆ ತೋಚಿತು ಬರೆದೆ ಅಷ್ಟೆ