ನನ್ನೊಲವು ನಿನ್ನದೇ ಸೊತ್ತು
ಕವನ
ಕುರುಡೆನ್ನಲೇ ನನ್ನ ಕಣ್ಣ
ಕ೦ಡರೂ ತಿಳಿಯದೇ ಹೊದೆನಲ್ಲ
ಬರಡೆನ್ನಲೇ ನನ್ನೆದೆಯ
ಕರೆಯದೇ ಹೊದೆನಲ್ಲ ಒಳಗೆ ಮಿಡಿಯುತ್ತಿದ್ದರೂ
ಹೃದಯ ನನ್ನದೆನ್ನುವುದಿಲ್ಲ
ನೀನಿರುರಿವತನಕ ಒಳಗೆ
ನೀನು ನನ್ನವಳೆ೦ದು ಹಲುಬುವುದಿಲ್ಲ
ಕಾಡುವುದಿಲ್ಲ ಕೊನೆಯವರೆಗೆ
ಕಲೆಯು ಕಲಾವಿದನ ಸೊತ್ತಲ್ಲ
ಪ್ರಕೃತಿಯಲಿ ಬೆರೆತರಿವು
ಕನಸು ಪ್ರೇಮಿಯ ಸೊತ್ತಲ್ಲ
ಮುಗ್ದತೆಯಲಿ ಬಿರಿದ ಸುಮ
ನನ್ನೊಲವು ನಿನ್ನದೇ ಸೊತ್ತು
ರಿ೦ಗಣಿಸುತಿದೆ ಮತ್ತೂ ಮತ್ತೂ
Comments
ಉ: ನನ್ನೊಲವು ನಿನ್ನದೇ ಸೊತ್ತು
In reply to ಉ: ನನ್ನೊಲವು ನಿನ್ನದೇ ಸೊತ್ತು by nagarathnavina…
ಉ: ನನ್ನೊಲವು ನಿನ್ನದೇ ಸೊತ್ತು