ನನ್ನ "ಅಪಾರ್ಥಗಳು"
ಶೌಟಾಲಯ(shoutಆಲಯ) : ವಿಧಾನಸಭೆ, ಲೋಕಸಭೆಗಳು, ಗಂಟಲ್ಮನ್ಗಳ ದರ್ಬಾರು ನೆಡೆಯುವ ಸ್ಥಳ
ಜಾಗಟೀಕರಣ : ಜಾಗತೀಕರಣದ ಬಗ್ಗೆ ವಿಶ್ವಕ್ಕೇ ಭಾಷಣ ಬಿಗಿಯುವುದು.
ಉದಾರೀಕರಣ : ಕೆಲವು ಹುಡುಗಿಯರು ತಮಗೆ ಪ್ರಪೋಸ್ ಮಾಡಿದ “ಸರಿ ಇರದ” ಹುಡುಗರ ಬಗ್ಗೆ ಉದಾರ ಭಾವನೆ ಹೊಂದುವುದು; ನಟಿಯರು “ಪಾತ್ರಕ್ಕೆ ಅವಶ್ಯವಿ(ರದಿ)ದ್ದರೆ” ವಿವಸ್ತ್ರರಾಗಿ ದೇಹ ಪ್ರದರ್ಶನ ಮಾಡುವಾಗ ಅನುಸರಿಸುವ ಉದಾರತೆ(ಉದ್ಧಾರತೆ)! ; ಉದ್ಧಾರದ ದಾರಿ ತೋರುವುದು.
ಹಣ : “ಹಣವೆಂದರೆ ಹೆಣವೂ ಬಾಯಿ ಬಿಡುತ್ತದೆ” ಹಾಗಾಗಿ ಇದನ್ನು ಪೊಲೀಸರು ತಮಗೆ ಬೇಕಾದ ಅಪರಾಧಿ ಹಿನ್ನೆಲೆಯ ವ್ಯಕ್ತಿ ಸತ್ತಿದ್ದರೂ ಆತನಿಂದ “ಬಾಯಿ ಬಿಡಿಸಲು” ಉಪಯೋಗಿಸಬಹುದು!
ಸಂಡಾಸನ : ಸಂಡಾಸಕ್ಕೆ ಕುಳಿತುಕೊಳ್ಳುವ ಆಸನ
ದಾಸಾನುದಾಸ : ರಾಜಕೀಯದಲ್ಲಿ ಚೇಲಾಗಳಿಗೆ ಇರುವ ಚೇಲಾಗಳು
ದಶಾವತಾರಿ : ಹಲವರು ಹಲ್ಲುಜ್ಜುವಾಗ
ರಾಜಕೀಯ : ಸೌಲಭ್ಯವಂಚಿತರ ಬಗ್ಗೆ ಅವಕಾಶ ವಂಚಿತರು ಜೋರಾಗಿ ಮಾತಾಡಿ, ಅವಕಾಶ ಗಿಟ್ಟಿಸುವ, “ಹೊಟ್ಟೆ” ತುಂಬಿಸಿಕೊಳ್ಳುವ ಕಲೆ
ರೇಬಿಸು : ಕೆಲವರನ್ನು ರೇಗಿಸುವಾಗ ಬರುವ ರೋಗ
ಕುಕ್ಕರಿಸು : ಕುಕ್ಕರ್ ಇಟ್ಟು ಅನ್ನ ಮಾಡು ( ಕುಕ್ ಮಾಡುವುದು)
ಆಚಾರ”villa”ದ ನಾಲಗೆ : ಆಚಾರವನ್ನೇ ಬಡಾಯಿಯ ಬಂಡವಾಳವನ್ನಾಗಿಸಿಕೊಂಡ ಮನೆಯ ಮಾಲೀಕನ ನಾಲಗೆ
ವಿ”Lossy” ಜೀವನ : ವಿ”ಲಾಸ”ದಿಂದ ಲಾಸ್ ಮಾಡಿಕೊಂಬುವವನ ಜೀವನ
ಲಾಭಿಸು : ಲಾಬಿ ಮಾಡಿ ಲಭಿಸುವಂತೆ ಮಾಡಿಕೊಂಡು ಲಾಭ ಮಾಡಿಕೊಳ್ಳುವುದು.
ಪಿಜ್ಜೋಪಡಿ : ಪಿಜ್ಜಾ ಹಟ್ (Pizza Hut)
ಫ಼್ರೀತಿ : Freeಯಾಗಿ ಸಿಕ್ಕ ಪ್ರೀತಿ
For more, visit www.aparthakosha.wordpress.com
Give your precious COMMENTs to improve the " APAARA ARTHA"s