ನನ್ನ ಇಂದಿನ ಹಾಡು - ಪಾಡು

ನನ್ನ ಇಂದಿನ ಹಾಡು - ಪಾಡು

ಬರಹ

ಧರೆಯೊಳು ಮೆರೆಯುವ
ಧಾರವಾಡ ಪುರದವ
ನಾನು ಕನ್ನಡದ ಕಂದ


ಏಳಬಹುದು ಏಳಲ್ಲ, ಎಂಟು ಘಂಟೆಗೆ ,
ಮನೆಯ ಬಿಡಬಹುದು ಒಂಬತ್ತಕ್ಕೆ ,
ಕಾಲೆಳೆಯುತ ಕೆಲಸಕೆ ಬರುವುದು ಹನ್ನೊಂದಕೆ ,
ಮನಸ್ವೀ ಓದಬಹುದು ದಿನವೆಲ್ಲ ,
ಒಂದಿಷ್ಟು ಹರಟಿ , ಊಟ ಮಾಡಿ , ಚಹವ ಕುಡಿದು ,
ಕಡಲ ತಡಿಗೆ ತೆರಳಿ , ಅರಬ್ಬೀ ಸಮುದ್ರವ ಸವಿದು ,
ದಾರಿಯಲ್ಲಿ ನಿದ್ದೆ ಮಾಡಿ , ಮನೆಯ ಸೇರಿ ,
ಮಡದಿಯೊಂದಿಗೆ ಸಂಜೆ ಕಳೆದು ವಿಶ್ರಮಿಸಿ
ಮಂಚವ ಹತ್ತುವದು ಹತ್ತಕೆ !