ನನ್ನ ಕಾವ್ಯಾನಂದ

ನನ್ನ ಕಾವ್ಯಾನಂದ

ಕವನ

ಮುಗಿಲ ಚೆಲುವು ನನಗೆ ಒಲವು

ಬಾನ ಅಂದ ಚಂದ...

ನಾನು ಅನುಭವಿಸೊs ಪರಮಾನಂದ

ಅದುವೆ ನನ್ನ ಕಾವ್ಯಾನಂದ

 

ಬೀಳೊ ಹನಿಯು ನನಗೆ ಮಳೆಯು

ಹರಿವ ಹೊಳೆಯ ಕಳೆಯು...

ನಾನು ಅನುಭವಿಸೊ ಮಹಾದಾನಂದ

ಅದುವೇ ನನ್ನ ಕಾವ್ಯಾನಂದ

 

ನೇಸರ ಹಸಿರು ನನಗೆ ಉಸಿರು

ಹಸಿರ ಚಿಗುರ ನೇಸರು...

ನಾನು ಅನುಭವಿಸೊ ಅತ್ಮಾನಂದ

ಅದುವೆ ನನ್ನ ಕಾವ್ಯಾನಂದ 

 

ನವಿಲ ನಾಟ್ಯ ನನಗೆ ಹಾಸ್ಯ 

ಕೋಗಿಲೆ ಕುಹೂಕುಹೂ...

ನಾನು ಅನುಭವಿಸೊ ಲಾಸ್ಯಾನಂದ

ಅದುವೇ ನನ್ನ ಕಾವ್ಯಾನಂದ

 

ದೇಶ ಕೋಶ ನನ್ನ ಕನಸು 

ಓದು ಬರಹದ ಮನಸು...

ನಾನು ಅನುಭವಿಸೊ ನಿತ್ಯಾನಂದ

ಅದುವೇ ನನ್ನ ಕಾವ್ಯಾನಂದ 

 

ಕವನ ಕಲ್ಪನೆ  ನನಗೆ ಕವಿತೆ

ಮನದ ಸ್ಫೂರ್ತಿ ಗೀತೆ...

ನಾನು ಅನುಭವಿಸೊ ಭಾವಾನಂದ

ಅದುವೇ ನನ್ನ ಕಾವ್ಯಾನಂದ

 

ನನ್ನ ಗೆಳತಿ ಬಾಳ ಒಡತಿ

ನನ್ನ ಜೀವ ಭಾವ...

ನಾನು ಅನುಭವಿಸೊ ಪ್ರೇಮಾನಂದ

ಅವಳೇ ನನ್ನ ಕಾವ್ಯಾನಂದ

 

-ಬಂದ್ರಳ್ಳಿ ಚಂದ್ರು, ತುಮಕೂರು

ಚಿತ್ರ್