ನನ್ನ ಚೆಲುವೆ.
ಬರಹ
ನಡೆ ಸರಳ ನುಡಿ ಸರಳ
ಸುಕುಮಾರಿ ಅಚ್ಛ ಸುಂದರಿ
ಮುಡಿಯಲ್ಲಿ ಮುಡಿದಿಹಳು
ದುಂಡು ಮಲ್ಲೆಯ ಮೊಗ್ಗು
ಬೀಸುವ ಸುಳಿಗಾಳಿಗೆ
ಹರಿದಾಡಿಹವು ಮುಂಗುರುಳು
ಕಂಗಳವು ಹೊಳೆದಿಹವು
ಮುಂಗಾರಿನ ಕೋಲ್ಮಿಂಚಿನಂತೆ
ಬಳುಕು ಬಳ್ಳಿಯ ಹಾಗೆ ನಿಲುವು
ಮೊಗವದೋ ಅರಳಿದ ಕೆಂದಾವರೆಯು
ಜೋಡಿಸಿಟ್ಟಿಹ ಹಾಲಂದದ ಹಲ್ಲುಗಳು
ಮೂಗಿಗಿಟ್ಟ ಮುತ್ತಿನ ಮೂಗುತಿಯು
ಕಾಲಲ್ಲಿ ಗೆಜ್ಜೆ ಗಲ್-ಗಲ್
ಕೈಗಳಲಿ ಬಳೆಗಳ ಜಲ್-ಜಲ್
ಕತ್ತಲಿಹುದು ತಳ-ತಳಿಸುವ ಕಾಸಿನ ಸರ
ಹಣೆ ಹುಬ್ಬ ಮೇಲೆ ತಿದ್ದಿ ತೀಡಿದ ಕಪ್ಪು
ಕೈ ಬೀಸಿ ಕರೆದಿಹಳು
ಕಣ್ತುಂಬಿ ನಿಂತಿಹಳು
ಸಗ್ಗದ ಚಲುವೆ ಇಳೆಗಿಳಿದಿಹಳು
ಕತ್ತಲಲಿ ತಿಂಗಳಾಗಿ ನಿಂತಿಹಳು
ಸಾಟಿಯಾಗರು ಯಾರೂ
ಇವಳಂದ ಚೆಂದಕೆ
ಹೂ ರಾಣಿಯಾಗಿಹಳು ಬೆಡಗಿ
ನನ್ನೆದೆಯ ಹೂ ಬನಕೆ.
ಜಯಪ್ರಕಾಶ ನೇ ಶಿವಕವಿ.