ನನ್ನ ಪುಟ್ಟ ಹೃದಯ...
ಬರಹ
ಕಣ್ಣಾ ಗೊ೦ಬೆಯಲ್ಲಿ ನಿನ್ನ ಚೆಲುವ ಸೆರೆ ಹಿಡಿದು ನಲಿಯುವ ಹೃದಯ...
ತಾಯ ಮಡಿಲಿನಲ್ಲಿ ಮಲಗಿ, ಜೊಗುಳದ ಹಾಡಿಗೆ ಮೈ ಮರೆತು ಮಿಡಿಯುವ ಹೃದಯ...
ಕುರುಡು ಪ್ರೇಮಕ್ಕೆ ಕಣ್ಣಾಗಿ, ಪ್ರೇಮಿಗೆ ಒಲವಿನ ಆಸರೆ ಈ ನನ್ನ ಹೃದಯ...
ನಿನ್ನ ಕಾಲಡಿಯಲ್ಲಿ ನಲುಗಿದ ಗುಲಾಬಿ ಹೂವಿನ ನೋವಿನ ನಗು ಈ ನನ್ನ ಪುಟ್ಟ ಹೃದಯ...