ನನ್ನ ಮಾತು

ನನ್ನ ಮಾತು

ಕವನ

ಪ್ರತಿ ದಿನವು ಇಲ್ಲಿ ಶುಭದಿನವು

ನಗುತಿರಲಿ ಚೆಲುವ ವದನವು

ಕಳೆಯದಿರಿ ಕಾಲ ಕನಸುಗಳಲಿ 

ಕಳೆದಿಹೆ ಸಮಯವ ನಿಮಿಷಗಳಲಿ.

 

ದಿನಗಳುರುಳಿ ಮುಗಿಯೆ ವಾರ

ಮತ್ತೆ ಬಾರದು ತಿಳಿ ಸಾಹುಕಾರ

ತಿಂಗಳುರುಳಿ ಮುಗಿಯೆ ವರ್ಷ

ಮರಳಿ ದೊರೆಯದು ಆ ಹರ್ಷ.

 

ನಿಲ್ಲದೇ ಕಾಲದೊಂದಿಗೆ ನಾ ನಡೆವೆ

ಕೂತೇಯಿದ್ದರೆ ಸೋತು ಕೆಡುವೆ 

ಘಳಿಗೆಯ ಅವಗುಣವ ಹುಡುಕದಿರು

ಶ್ರಮವ ನಂಬಿ ನೀ ದುಡಿಯುತಿರು.

 

ಗೋಡೆಯ ಗೂಟದಿ ನಾನು

ನಿನ್ನ ನೋಟಕೆ ಸಿಗನೇನು?

ನೋಡುತಿರಲು ಹಾಗೇ ನೀನು

ಕೊನೆಗೆ ನಾನೇ ಕೊನೆಯಾಗುವೆನು!!

 

ಉಳಿಸಿ ತೆರಳುವೆ ನೆನಪು

ನೆನಪುಗಳಾಗಲಿ ಹೊಳಪು

ಬದುಕು ಕಪ್ಪು-ಬಿಳುಪು

ಹಾಳೆಯಲಿ ಅದರದೇ ಛಾಪು.

-ನಿರಂಜನ ಕೆ ನಾಯಕ, ಶಿಕ್ಷಕ, ಮಂಗಳೂರು.

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್