ನನ್ನ ಹಬ್ಬ

ನನ್ನ ಹಬ್ಬ

ಬರಹ

ಹಬ್ಬ ಬಂತೆಂದರೆ ನನ್ನ ಹೆಂಡತಿಗೆ ಖುಷಿಯೊ ಖುಷಿ
ಏಕೆಂದರೆ ನನಗೆ ತುಂಬಾ ಕಸಿವಿಸಿ

ಕೊಡಿಸ್ಬೇಕು ಸೀರಿ, ಕುಡಿಸ್ಬೇಕು ಬಂಗಾರ
ಇಲ್ಲದಿದ್ದರೆ ಹೊಟ್ಟೆಗೆ ನೀರೆ ಆಹಾರ

ಮಾಡ್ಯಾಳ ಅಡುಗೆ ಬಲು ಜೋರು
ಆದರೆ ಅದನ್ನ ತಿನ್ನೊಕೆ ನನಗೆ ಬೋರು

ಕರೆದಾಳ ಸಂಡಿಗೆ ಹಪ್ಪಳಾ
ತಿಂದರೆ ಬಾಯಾಗ ಅದರದೇ ಸಪ್ಪಳಾ

ಮಡ್ಯಾಳ ಚಕ್ಕುಲಿ, ಕಡಬೊಳಿ, ಉಂಡಿ
ತಿಂದರೆ ಬಾಯಿಯೆ ಉಗಿಬಂಡಿ.

ಮೊದಲು ಉಳಿದಿತ್ತು 23 ಹಲ್ಲು,
ತಿಂದಮೇಲೆ ಉಳಿತಾವ 2 -3.

ಆಹಾ ಕಡುಬಿನ ವಾಸನೆ ಮನೆ ತುಂಬಿತ್ತು
ಅದ್ಕ ಎನೊ ತಲೆ ತುಂಬ ನೊಯ್ತಿತ್ತು

ಬೇರೆಯವರ ಕಂಡ್ರ ಅವ್ಳಿಗೆ ಉರಿಉರಿ
ಯಾಕಂದ್ರ ಅವತ್ತು ಅವ್ಳ ಕಣ್ಣಿಗೆ ಅವಳೇ ಸುಂದರಿ

ಲಂಬೋಧರ ವಿಘ್ನೇಶ್ವರ ಉಮಾಸುತ
ನಮ್ಮೆಲ್ಲರ ವಿಘ್ನಗಳ ಬಿಡಿಸುತ
ಕಷ್ಟಗಳ ಕಳೆಯುತ
ನಮ್ಮೆಲ್ಲರ ಕಾಯುತ
ಕಡಬುಗಳ ತಿನ್ನುತ
ನಮ್ಮೆಲರ ಮನೆಗೆ ಬಾ
ಬಂದು ನಮ್ಮೆಲ್ಲರ ಸಲಹೊ