ನಮಗೇನು ಬೇಕು??

ನಮಗೇನು ಬೇಕು??

ಬರಹ

ಮಾನವ ಜನ್ಮಅಮೂಲ್ಯವಾದದ್ದು. ಅದಕ್ಕೆಂದೇ - 'ಮಾನವ ಜನ್ಮ ದೊಡ್ಡದು ಇದ ಹಾನಿ ಮಾಡಲು ಬೇಡಿ ಹುಚ್ಚಪ್ಪಗಳಿರಾ' ಎಂದು ದಾಸವರೇಣ್ಯರೊಬ್ಬರು ಹಾಡಿದ್ದಾರೆ. ಸನ್ಮಾಗಿಱಗಳೆಲ್ಲರೂ ಈ ಮಾತನ್ನೇ ವಿಧವಿಧವಾಗಿ ನಿರೂಪಿಸಿದ್ದಾರೆ. ಇಂದಿನ ಎಲೆಕ್ಟ್ರಾನಿಕ್ಸ್ ಯುಗದಲ್ಲಿ ಸನ್ಮಾಗಿಱಗಳಾಗಬೇಕೆಂಬ, ಮನ:ಶಾಂತಿ ಪಡೆಯಬೇಕೆಂಬ ಹಸಿವು, ಕೂಗು ಹಾಗೂ ಬಯಕೆ ಮನಸ್ಸಿನಾಳದಲ್ಲಿದ್ದರೂ ಕೂಡ ಲೌಕಿಕ ಆಕಷಱಣೆಗಳು ಹಾಗೂ ಕೌಟುಂಬಿಕ ಜಂಜಾಟಗಳು ಆ ಮಿಡಿತವನ್ನು ಗರಿಗೆದರಲು ಬಿಡುವುದೇ ಇಲ್ಲ. ಜ್ಞಾನೋದಯವಾಗುವ ಹೊತ್ತಿಗೆ ಕಾಲ ಮಿಂಚಿರುತ್ತದೆ; ಕಾಲನ ದೂತರ ಕರೆ ಬಂದಿರುತ್ತದೆ.

ಒಂದು ವಾಕ್ಯವನ್ನು ರಚಿಸಿ ಮುಗಿಸಿದಾಗ ನಾವು ಅದಕ್ಕೆ ಪೂಣಱವಿರಾಮ ಹಾಕುತ್ತೇವೆ. ಅಂತೆಯೇ ಹಲವಾರು ವಾಕ್ಯವ್ಋಂದಗಳನ್ನು ಸೇರಿಸಿ ಒಂದು ಲೇಖನವನ್ನೂ ರಚಿಸುತ್ತೇವೆ. ಲೇಖನದ ಕೊನಡಯ ವಾಕ್ಯದ ಅಂತ್ಯದಲ್ಲಿ ಬರುವುದೂ - ಪೂಣಱವಿರಾಮ. ಚಚೆಱ, ಮಾತುಕತೆಗಳು ಮಿತಿಮೀರಿದಾಗ ಅದಕ್ಕೆ ಪೂಣಱವಿರಾಮ ಹಾಕಲು ಯಾರಾದರೂ ಒಬ್ಬರು ಇದ್ದೇ ಇರುತ್ತಾರೆ.
ಎಲ್ಲದಕ್ಕೂ ಆದಿ-ಅಂತ್ಯ ಇದ್ದಂತೆ ಪೂಣಱವಿರಾಮ ನಮ್ಮ ಎಲ್ಲ ಚಟುವಟಿಕೆಗಳಿಗೂ ಅತ್ಯಗತ್ಯ. ಪೂಣಱವಿರಾಮವಿಲ್ಲದ ವಾಕ್ಯ ಯಾವಾಗಲೂ ಅಸಂಪೂಣಱ; ಅಸ್ಪಷ್ಟ. ಅಂತೆಯೇ ನಮ್ಮ ನಿಜ ಜೀವನದಲ್ಲೂ ಕೂಡ ಸೂಕ್ತ ಘಟ್ಟಗಳಲ್ಲಿ ಕೆಲವು ವಿಷಯಗಳಿಗೆ ಪೂಣಱವಿರಾಮ ಕೊಡುವುದೂ ಅಷ್ಟೇ ಅವಶ್ಯಕ; ಅನಿವಾರ್ಯ. ಇಲ್ಲದಿದ್ದರೆ ವಾಕ್ಯ ಅಥಱಹೀನವಾದಂತೆ ನಮ್ಮ ಬದುಕೂ ಕೂಡ ತನ್ನ ಅಥಱವನ್ನು ಕಳೆದುಕೊಂಡೀತು. ಆದರೆ, ಎಲ್ಲಿ, ಯಾವಾಗ ಮತ್ತು ಯಾವುದಕ್ಕೆ ಪೂಣಱ ವಿರಾಮ ಹಾಕಬೇಕು ಎಂಬುದನ್ನು ಮಾತ್ರಾ ಪ್ರತಿ ವ್ಯಕ್ತಿಯೂ ತನ್ನ ವ್ಐಯುಕ್ತಿಕ ಅನುಭವಗಳ ಹಾಗೂ ಅವಶ್ಯಕತೆಗಳ ಹಿನ್ನೆಲೆಯಲ್ಲಿ ತಾನೇ ನಿಧಱರಿಸಬೇಕಾಗುತ್ತದೆ.

ನಮ್ಮ ಜೀವನದಲ್ಲಿ ಬೇಕುಗಳ ಹಾವಳಿಯಂತೂ ಅನಿಯಂತ್ರಿತ. ಯಾವುದೇ ಉಪದೇಶವಿಲ್ಲದೇ, ಯಾವುದೇ ದೀಕ್ಷೆಯಿಲ್ಲದೇ, ಯಾವುದೇ ಸಾಧನೆಯಿಲ್ಲದೇ, ಯಾವುದೇ ಜಪ-ತಪಗಳಿಲ್ಲದೇ, ಎಲ್ಲಕ್ಕಿಂತ ಹೆಚ್ಚಾಗಿ ಯಾವುದೇ ಗೊಣಗಾಟವಿಲ್ಲದೇ ಮಾನವ ಮಾಡುತ್ತಿರುವ ನಿರಂತರ ಪಾರಾಯಣ ಮಂತ್ರವೆಂದರೆ - 'ಬೇಕು'. ಪ್ರಪಂಚಕ್ಕೆ ಕಾಲಿಟ್ಟ ಕೂಡಲೇ ಆರಂಭವಾಗುವ ಈ ಬೇಕುಗಳ ಪಟ್ಟಿಗೆ ಬ್ರೇಕೇ ಇಲ್ಲ! ಪ್ರಪಂಚದಲ್ಲಿ ತನ್ನ ಅವಶ್ಯಕತೆಗಳಿಗಿಂತ ಹೆಚ್ಚು ಕೂಡಿಡುವ ಪ್ರವ್ಋತ್ತಿ ಇತರೇ ಪ್ರಾಣಿಗಳಿಗೆ ಹೋಲಿಸಿದರೆ ಬಹುಶ: ಕೇವಲ ಮನುಷ್ಯನಲ್ಲೇ ಹೆಚ್ಚು. ಆದರೆ ಈ ಬೇಕುಗಳ ನಿವಱಹಣ ಮಾತ್ರ ಬಲು ನಾಜೂಕಾದದ್ದು, ಕ್ಷಿಷ್ಟವಾದದ್ದು.

ನಮಗೇನು ಬೇಕು ಎಂಬುದು ನಮಗೇ ಸರಿಯಾಗಿ ತಿಳಿಯದಿರುವುದು ಆಶ್ಚಯಱವೆಂದರೂ ನಿಜ ಸಂಗತಿ. ಅಂತೆಯೇ ಕಂಡದ್ದನ್ನೆಲ್ಲ ಬಾಚುವ, ಹೊಂದುವ, ಅನುಭವಿಸುವ ಪ್ರವ್ಋತ್ತಿ ಎಲ್ಲೆಡೆ ಬೇರೂರಿದೆ. ತಮಗೇನು ಬೇಕು? ಎಷ್ಟು ಬೇಕು? ಎಂಬುದನ್ನು ಅರಿಯದೇ ಕೆಲವರು ಅಜ್ಞಾನದಿಂದ ನಾಶವಾಗುತ್ತಾರೆ. ಕೆಲವರು ಬೇಕುಗಳ ಆಯ್ಕೆಯಲ್ಲಿ ಎಡವಿ ನಾಶ ಹೊಂದುತ್ತಾರೆ. ಆದರೆ ಮತ್ತಿನ್ನೂ ಕೆಲವರು ಈ ಬೇಕುಗಳ ವಿವೇಚನಾರಹಿತ ಆಯ್ಕೆಯಿಂದ ನಾಶ ಹೊಂದಿದವರನ್ನೇ ಅನುಸರಿಸಿ ತಾವೂ ನಾಶವಾಗುತ್ತಾರೆ. ಈ ಪ್ರಕ್ರಿಯೆ ಅನಾದಿಕಾಲದಿಂದಲೂ ಸಾಗಿದೆ. ಆದಾಗ್ಯೂ ಈ ರೀತಿ ನಾಶ ಹೊಂದಿದವರಿಂದ ಪಾಠ ಕಲಿತು, ಸನ್ಮಾಗಱಕ್ಕೆ ಬಂದವರ ಸಂಖ್ಯೆ ಮಾತ್ರ ವಿರಳ. ಈ ಬೇಕುಗಳೆಂದರೇನು? ಸಂಕ್ಷಿಪ್ತವಾಗಿ ಹಾಗೂ ಲೌಕಿಕ ದ್ಋಷ್ಟಿಯಿಂದ ಹೇಳಬೇಕೆಂದರೆ ಇವು ವ್ಯಕ್ತಿಯ ಮತ್ತು ಅವನ ಅವಲಂಬಿತರ ದಿನ ನಿತ್ಯದ ಊಟೋಪಚಾರಕ್ಕೆ, ಸುಖನಿದ್ರೆಗೆ ಹಾಗೂ ಈ ಸುಖಸಂಸಾರಕ್ಕೆ ಅಗತ್ಯವಾದ ಪ್ರಾಪಂಚಿಕ ವಸ್ತುಗಳು. ಐಷಾರಾಮ ಜೀವನ ಶ್ಐಲಿಯಂತೂ ಈ ಬೇಕುಗಳ ಪಟ್ಟಿಯನ್ನು ಇನ್ನಷ್ಟು ದೊಡ್ಡದಾಗಿಸಿಬಿಟ್ಟಿದೆ. ತನ್ನ ಕುಟುಂಬ ನಿವಱಹಣೆಗೆ ಅಗತ್ಯವಾಗಿರುವುದಷ್ಟನ್ನು ಗಳಿಸುವುದನ್ನು ವೇದಗಳು ಕೂಡ ನಿಷೇಧಿಸುವುದಿಲ್ಲ. ಆದರೆ ಗಳಿಸುವುದರ ಕಡೆಗೆ ಗಮನ ಅಗತ್ಯ. ತನಗೆ, ತನನ್ನವಲಂಬಿಸಿದವರಿಗೆ (ಜೀವನ ಪಯಱಂತ) ಒಂದು ಉತ್ತಮ ಗುಣಮಟ್ಟದ, ನೆಮ್ಮದಿಯ ಜೀವನ ನಡೆಸುವಷ್ಟು ವ್ಯವಸ್ಥೆ ಆಗುವವರೆಗೆ ಈ ಬೇಕುಗಳ ಅವಶ್ಯಕತೆ ಇರಬೇಕು. ಉತ್ತಮ ಜೀವನ ಮಟ್ಟ ಎಂದರೆ ಸಾತ್ನಿಕ ರೀತಿಯಲ್ಲಿ, ಯಾವುದೇ ಐಷಾರಾಮ ಅಭ್ಯಾಸಗಳಿಗೆ ದಾಸರಾಗದ ರೀತಿಯಲ್ಲಿ, ಶಾಂತ-ಸಂತ್ರಫ್ತ ಜೀವನ ನಡೆಸುವುದು ಎಂದು ಪ್ರಸ್ತುತ ಅಥ್ಐಸಬಹುದು. ಆ ಗುರಿ ತಲುಪಿ ಕೂಡಲೇ ಹಾಕಬೇಕು ಈ ಬೇಕುಗಳಿಗೆ ಪೂಣಱವಿರಾಮ.

ಈ ಪ್ರಾಪಂಚಿಕ ವಸ್ತುಗಳ ಆಕಷಱಣೆಯನ್ನು ಕಳೆದುಕೊಳ್ಳುತ್ತಲೇ ನಮ್ಮಲ್ಲಿರುವ ಸನ್ಮಾಗಱದ ಮಿಡಿದ ಜಾಗ್ಋತಗೊಳ್ಳಬೇಕು. ಸತ್ಸಂಗ, ಜಪ-ತಪ, ದ್ಐವಾರಾಧನೆ, ಸಚ್ಛಾರಿತ್ತ್ಯ, ಸದ್ಭಾವನೆ, ಸದ್ಗ್ರಂಥ ಪಠಣ, ದಾನ-ಧಮಱ, ಪರೋಪಕಾರ ಮುಂತಾದ ಅನೇಕ ಅಧ್ಯಾತ್ಮಿಕ 'ಬೇಕು' ಗಳ ಪಟ್ಟಿಯೇ ಸಿದ್ಧವಾಗಬೇಕು. ಸೋಜಿಗವೆಂದರೆ, ಈ ಬೇಕುಗಳ ಪಟ್ಟಿಗೆ ಪೂಣಱವಿರಾಮವೇ ಇಲ್ಲ! ಈ ಬೇಕುಗಳ ಪಟ್ಟಿ ಬೆಳೆದಷ್ಟೂ, ದಾಹ ಹೆಚ್ಚಾದಷ್ಟೂ ನಮ್ಮ ಮಾನಸಿಕ ನೆಮ್ಮದಿ ಮತ್ತು ಪರೋಕ್ಷವಾಗಿ ದ್ಐಹಿಕ ಆರೋಗ್ಯ ತಂತಾನೇ ಇಮ್ಮಡಿಯಾದೀತು. ಲೌಕಿಕ ಬೇಕುಗಳ ಪೂರ್ಐಕೆಗೆ ಎಂತೆಂತಹ ಸಕಱಸ್ ಮಾಡುವ ನಾವು ಈ ಅಧ್ಯಾತ್ಮಿಕ ಬೇಕುಗಳನ್ನು ಪಡೆಯುವತ್ತ, ನಮ್ಮದಾಗಿಸಿಕೊಳ್ಳುವತ್ತ ಅಷ್ಟೇ ಪ್ರಯತ್ನಶೀಲರಾಗುವುದೂ ಅತೀ ಅವಶ್ಯ. ನೂರು ಹಸುಗಳ ಒಡೆಯನು ಕುಡಿಯುವುದು ಒಂದು ಲೋಟ ಹಾಲು. ನೂರು ಹಳ್ಳಿಗಳ ಸರದಾರನೂ ತಿನ್ನುವುದು ಒಂದು ಮುಷ್ಟಿ ಅನ್ನ. ನೂರು ಮಹಲ್ಲುಗಳಿದ್ದರೂ ಮಲಗುವುದು ಒಂದು ಮಂಚದ ಮೇಲೆ ಮಾತ್ರಾ. ಉಳಿದುದೆಲ್ಲ ಇತರರಿಗೆ ಸೇರಿದ್ದು. ನಮಗೇನು ಬೇಕು ಎಂಬುದನ್ನು ಗಾಢವಾಗಿ, ಅಂತಮುಱಖವಾಗಿ ಚಿಂತಿಸಿದಾಗ ನಿಧಱರಿಸುವುದು ಬಹುಶ: ಹೆಚ್ಚು ಕಷ್ಟವಾಗಲಾರದು. ಆದರೆ ಆ ನಿಧಾಱರಕ್ಕೆ ಮಾತ್ರ ಬೇಕು - ದ್ಋಢ ಚಿತ್ತ.

ಕಾಖಾಱನೆಯಿಂದ ತಯಾರಾಗಿ ಬಂದ ವಸ್ತುಗಳ ಮೇಲೆ expiry date ನಿಗದಿ ಆದಂತೆ, ಹುಟ್ಟಿದ ಕೂಡಲೇ ಸಾವು ಕಟ್ಟಿಟ್ಟ ಬುತ್ತಿ. ಆದುದರಿಂದ, ನಮ್ಮ ಲೌಕಿಕ ಬೇಕುಗಳ ಪಟ್ಟಿಗೆ ಆದಷ್ಟೂ ಬೇಗ (ಒಂದು ಸಮಾಧಾನಕರ ಹಂತ ತಲುಪಿದ ನಂತರ) ಬ್ರೇಕ್ ಹಾಕೋಣ; ಪೂಣಱವಿರಾಮವಿಡೋಣ. ತದನಂತರ, ಜೀವನೋದ್ಧಾರದ, ಮಾನಸೋದ್ಧಾರದ ಹಾಗೂ ತನ್ಮೂಲಕ ವಿಶ್ವಶಾಂತಿಗೋಸ್ಕರ ಹೊಸ ಪಾರಮಾಥಿಱಕ ಬೇಕುಗಳ ಅನ್ವೇಷಣೆಯಲ್ಲಿ, ಆಚರಣೆಯಲ್ಲಿ ಹಾಗೂ ನಿರಂತರ ಸಾಧನೆಯಲ್ಲಿ ಎಲ್ಲರೂ ತೊಡಗಿಕೊಳ್ಳೋಣ. ಎಲ್ಲಿ, ಯಾವಾಗ ಮತ್ತು ಯಾವ ಹಂತದಲ್ಲಿ ನಮ್ಮ ಲೌಕಿಕ ಅನ್ವೇಷಣೆಗಳಿಗೆ ಪೂಣಱವಿರಾಮ ಹಾಕಬೇಕೆಂಬುದನ್ನು ಮಾತ್ರ ಪ್ರತಿ ವ್ಯಕ್ತಿಯ ವಿವೇಚನೆಗೆ ಬಿಟ್ಟದ್ದು. ಜೀವನದಲ್ಲಿ ಉಳಿದ ಅಲ್ಪಕಾಲದಲ್ಲಾದರೂ ಸ್ಲಲ್ಪ ನೆಮ್ಮದಿಯ ಜೀವನ ನಮ್ಮದಾಗಬೇಕಾದರೆ, ಈವರ್ಎಗೆ ನಾವು ಸವೆಸಿದ ಹಾದಿ ಹಾಗೂ ಆ ಹಾದಿಯ ಸಿಹಿ-ಕಹಿ ನೆನಪುಗಳ ಮತ್ತು ಅನುಭವಗಳ ಹಿನ್ನೆಲೆಯಲ್ಲಿ ನಮ್ಮ ಆತ್ಮಾವಲೋಕನ ಮಾಡಿಕೊಳ್ಳಬೇಕಾದರೆ, ಅರಿತೋ ಅರಿಯದೆಯೋ ಮಾಡಿದ ತಪ್ಪುಗಳಿಗೆ ಸ್ವಲ್ಪವಾದರೂ ಪಶ್ಚಾತ್ತಾಪ ಪಡಬೇಕೆನ್ನುವ ಅಭಿಲಾಷೆ ನಮ್ಮದಾದರೆ, ಈ ನಿಧಾಱರವನ್ನು ನಾವು ಆದಷ್ಟೂ ಜಾಗ್ರತೆ ತೆಗೆದುಕೊಳ್ಳಬೇಕು. ಏಕೆಂದರೆ ಈ ಹಂತದ ನಂತರ ನಮಗಿರುವ ಕಾಲ ಬಹು ಅತ್ಯಲ್ಪ; ಅನಿಶ್ಚಿತ. ಇಲ್ಲಿ ನಾವು ಪೂಣಱವಿರಾಮವಿಡುವಲ್ಲಿ ಸ್ವಲ್ಪ ತಡಮಾಡಿದರೂ ಜೋಕೆ, ದೇವರೇ ನಮ್ಮ ಆಯುಷ್ಯಕ್ಕೇ ಪೂಣಱವಿರಾಮವನ್ನಿಟ್ಟಾನು!