ನಮ್ಮನ ಆಳೊ ಮಂದಿ

ನಮ್ಮನ ಆಳೊ ಮಂದಿ

ಕವನ

ಮೌನದಲಿ ಸೋಲನೆ೦ಬ ಧಿಮಾಕು, ಮಾತಿನಲಿ ಗೆಲ್ಲಲ್ಲೊಂದು ಪೋಷಾಕು
ನಿಂತಲ್ಲಿ ನಿಲ್ಲದೇ ಸುತ್ತಾಕು , voteಗಾಗಿ ದೇಶನ ತೂಕಕ್ಕೆ ಹಾಕು !

ಗೆಲ್ಲೋದೊಂದೇ ಬೇಕಾಗಿರೋದು ನಿಮ್ಗೆ , ಕುರ್ಚಿ ಮುಂದೆ ಎಲ್ಲಾನೂ ಸುಮ್ಗೆ ನುಣಗೆ
ಗಂಟಲು ಹರಿದ್ರೂ ನಿಲ್ಸಲ್ಲಾ ಭಾಷಣ, ಜೇಬು ಹರಿದರೂ ನಿಲ್ಲಲ್ಲ ತುಂಬಿಸೊ ಹೂರಣ !

Tax ಕಟ್ಟೋ ಮಂದಿ ನಾವು , ಖರ್ಚು ಮಾಡೋರ್ ಮಾತ್ರ ನೀವು
ಖಾಲಿ ಒಂದು ರೂಪಾಯಿ ಹುಟ್ಟಾಕಿಲ್ಲ ನಮಗೆ , ಕೋಟಿ ಹಂಗೇ ಸಿಗೋದು ನಿಮಗೆ ಹೆಂಗೆ ?

ನ್ಯಾಯ ನಿಮ್ಮ ಹಾದಿನ ಮೂಸು ನೋಡಲ್ಲ , cold ಆಗೋ ಭೀತಿ ಅದಕ್ಕೇ ಅಲ್ವಾ ?
ಮೂಗು ಕಟ್ಕೊಂಡಿರೋ ನ್ಯಾಯ , ನಮ್ಮನ್ನ ನೋಡಿ ಕಣ್ಣೂ ಮುಚ್ಕೊಂಡೈತೆ ಕಣಯ್ಯ !!

ಇಷ್ಟೆಲ್ಲಾ ಗೊತಿದ್ರು ದೆಹಲಿ ಜನ ಮಾಡ್ತಾನೇ ಇದಾರೆ ಹೋರಾಟ
ಆ ಹುಡುಗಿ ಜೀವನಕ್ಕಿಂತ ದೊಡ್ಡದಾ singhಗೆ security ಅನ್ನೋ ಆಟ , Lotusಗೆ ಕೆಸರೆರಚಾಟ ?