ಚಿತ್ರದಲ್ಲಿರುವ ಅಕ್ಷರಗಳು ಸರಿಯಾಗಿ ಕಾಣದಿದ್ದ ಪಕ್ಷದಲ್ಲಿ, ಈ ಕೆಳಗಿನ ಸಾಲುಗಳನ್ನು ಓದಿಕೊಳ್ಳಿ.....
ಜಲಧಿಯೊಡೆಯನ ಮಗಳ ಪ್ರೇಮದಿಂ ಕೈ ಪಿಡಿದ
ವಾಸುದೇವನ ಪಾದಕಮಲದಲಿ ಜನಿಸಿ
ಹಟದಿಂದ ಧುಮುಕಿದಳ ಜಟೆಯಲ್ಲಿ ಧರಿಸಿದನ
ರಜೆ ರಜೆಯು ಪೊಂದಿರ್ಪ ವಿಶ್ವೇಶ್ವರನ ಗುಡಿ ಕಾಣೋ ಈ ನಮ್ಮ ವಿದ್ಯಾಲಯ
ನರಹರಿಯು ಲೋಕಮಂ ಕಾಯಲು ಸಿಂಹ-
- ವೋಲ್ ಬಂದು ಕೊಂದ ಮದಾಂಧ
ದನುಜನ ಅಯ್ಯನಜ್ಜನ ಮನದ
ಯವನಿಕೆಯಲ್ಲಿ ಜನಿಸಿದ ಸರಸತಿಯ ನೆಲೆ ಕಾಣೋ ಈ ನಮ್ಮ ವಿದ್ಯಾಲಯ
ವಿಷಯದಾಸೆಯ ಹೊರಗೆ ವಿಶದವಾಗಿಹ ವಿ-
- ದ್ಯಾಜಗದ ವಿಸ್ತಾರವನು ವಿವರ ವಿಭ್ರಮದೊಡನೆ
ಲಲಿತ ವಿದ್ರುಮದಂಥ ವಿದ್ವತ್ತಿನಲಿ ತಿಳಿಸಿ
ಯಶವ ವಿಬೋಧಿಸಿದ ವಿದ್ಯಾಧರಾದಿಯರ ವಿಕ್ರಮದ ಕೈಗೂಸು ಈ ನಮ್ಮ ವಿದ್ಯಾಲಯ
Comments
ಚಿತ್ರದಲ್ಲಿರುವ ಅಕ್ಷರಗಳು