ನಮ್ಮ ಭೂಮಿಯನ್ನು ಸಕ್ರಿಯಗೊಳಿಸೋಣ
ಇದು ಈ ವರ್ಷದ ‘ವಿಶ್ವ ಭೂಮಿ ದಿನದ’ (ಎಪ್ರಿಲ್ ೨೨) ಘೋಷ ವಾಕ್ಯ, ಗತಿಸಿಹೋದ ಶತ ಶತಮಾನಗಳ, ಸಹಸ್ರ ಸಹಸ್ರಮಾನಗಳ ಚರಿತ್ರೆಯ ಪಾಠ ಈ ಭೂಮಿಯ ಮಣ್ಣಿನ ಕಣಕಣದಲ್ಲಿ ಅಡಕವಾಗಿದೆ, ನಮಗೆಲ್ಲ ಗೊತ್ತಿರಲಿ ಮತ್ತು ಅವಶ್ಯಕವಾಗಿ ತಿಳಿದಿರಲಿ, ಈ ಭೂಮಿ ನಮ್ಮದಲ್ಲ, ನಮ್ಮ ಮೊಮ್ಮಕ್ಕಳು, ಮರಿಮಕ್ಕಳಿಂದ ಎರವಲು ಪಡೆದದ್ದು, ಹಾಗಾಗಿ, ವರ್ತಮಾನದಲ್ಲಿ ಬದುಕುತ್ತಿರುವ ನಾವು ಮುಂದಿನ ಭವಿಷ್ಯದ ಜನಾಂಗದಿಂದ ಎರವಲು ಪಡೆದ ಈ ಭೂಮಿಯ ಬಗ್ಗೆ ಒಂದು ಗುರುತರವಾದ ಕೇಂದ್ರ ಪ್ರಜ್ಞೆಯೊಂದಿಗೆ ಈ ಮಣ್ಣನ್ನು, ಈ ಮಣ್ಣಿನ ಕಣಕಣವನ್ನು ಜತನದಿಂದ ಸಂರಕ್ಷಿಸಿ ಜೋಪಾನವಾಗಿ ವರ್ಗಾಯಿಸಬೇಕಾಗಿದೆ, ಈ ಕೆಲಸವನ್ನು ನಾವು ಇಂದು ಮಾಡದಿದ್ದರೆ ಭವಿಷ್ಯದ ಜನಾಂಗ ನಮ್ಮನ್ನು ಕ್ಷಮಿಸುವುದಿಲ್ಲ, ಭವಿಷ್ಯದ ಜನಾಂಗದ ಮುಂದೆ ನಾವೆಲ್ಲ ಖಳನಾಯಕರಂತೆ ಕಾಣಬೇಕಾಗುತ್ತದೆ, ಅಪವಾದದಿಂದ ಮುಕ್ತರಾಗಿ ಅವರ ಭೂಮಿಯನ್ನು ನಾವು ಸಂರಕ್ಷಿಸಿ ಬಿಟ್ಟುಕೊಟ್ಟು ಹೋಗೋಣ, ವಿಶ್ವ ಭೂಮಿ ದಿನದ ಒಂದು ಅವಲೋಕನ ಮಾಡಿಕೊಳ್ಳೋಣ.
-ಡಿ ಎಂ. ಮಂಜುನಾಥಸ್ವಾಮಿ, ಚಿಕ್ಕಮಗಳೂರು