ನಮ್ಮ ಮೆಟ್ರೋ ನಮ್ಮ ಹೆಮ್ಮೆ -ಮಲೇಶ್ವರಂ ಸಂಪಿಗೆ ರಸ್ತೆ ಹಸಿರು ಮೆಟ್ರೋ (ಭಾಗ -1)

ನಮ್ಮ ಮೆಟ್ರೋ ನಮ್ಮ ಹೆಮ್ಮೆ -ಮಲೇಶ್ವರಂ ಸಂಪಿಗೆ ರಸ್ತೆ ಹಸಿರು ಮೆಟ್ರೋ (ಭಾಗ -1)

 

 

ಸುಮಾರು ವರುಷಗಳಿಂದ ಬೆಂಗಳೂರಲ್ಲಿ ಮೆಟ್ರೋನ ಮೋನೋನಾ ?

ಅಥವಾ ಸ್ಥಳೀಯ (ಲೋಕಲ್ )ರೈಲು ವ್ಯವಸ್ಥೆ ಸೂಕ್ತವೇ ಎಂದು ಚರ್ಚೆ ಆಗುತ್ತಾ ತಲೆಗೊಬ್ಬರು ಏನೇನೋ ಹೇಳುತ್ತಿದ್ದುದು ನೆನಪಿದೆ.

ಮೋನೋ ಗೆ ಖರ್ಚು ಕಡಿಮೆ -ಮೆಟ್ರೋ ಗೆ ಜಾಸ್ತಿ -ಜಾಗವೂ ಜಾಸ್ತಿ ಬೇಕು ,ಲೋಕಲ್ ರೈಲು ಕಾರ್ಯ ಸಾಧುವಲ್ಲ ಹೀಗೆ ಏನೇನೋ ಹೇಳಿ ಅದನ್ನು ನಾವು ದಿನ ನಿತ್ಯ ಕೇಳಿ -ಅದರ ನಿರ್ಣಯ -ಅಭಿಪ್ರಾಯ ಅನಿಸಿಕೆ ನೀತಿ ನಿರೂಪಕರ ಮುಂದೆ ವ್ಯಕ್ತಪಡಿಸಲಾಗದೆ -ಒಮ್ಮೊಮ್ಮೆ ಡೆಲ್ಲಿ -ಕೋಲ್ಕೊತಾ -ಮೆಟ್ರೋ ಬಗ್ಗೆ ಕೇಳಿ ವಿದೇಶಗಳ ಅತ್ಯಾಧುನಿಕ ವೇಗದ ಮೆಟ್ರೋ ಮೋನೋ ರೈಲುಗಳ ಪ್ರಯಾಣದ ಸನ್ನಿವೇಶಗಳನ್ನು ಸಿನೆಮಾಗಳಲ್ಲಿ ನೋಡಿ ಎಲ್ಲದರಲ್ಲಿ ಮುಂದೆ ಇರೋ ನಮ್ಮೀ ಕರ್ನಾಟಕಕ್ಕೆ ಯಾಕೆ ಮೆಟ್ರೋ ಮೋನೋ ರೈಲು ಬರಲಿಲ್ಲ ಬರೋಲ್ಲ -ಹೋಗಲಿ ಲೋಕಲ್ ರೈಲೂ ಬೇಡವೇ? ಈ ಟ್ರಾಫಿಕ್ ಜಾಮ್ -ಆಟೋ ಖಾಸಗಿ ಬಸ್ಸುಗಳ ದರ್ಬಾರ್ ನೋಡಿ ಬೇಜಾರು ಮಾಡಿಕೊಂಡದ್ದು ಎಸ್ಟೋ ಸಾರಿ ...!! 

ಕೊನೆಗೂ ವರುಷಗಳ ಚರ್ಚೆ ಸಭೆಗಳು ನಡೆದ ನಂತರ ಮೋನೋ ಬದಲಿಗೆ ಮೆಟ್ರೋ ಆರಿಸಿದ್ದು ಆಯ್ತು - ಅದನ್ನು ಅನುಮೋದಿಸಿ ಕೇಂದ್ರ ಸರ್ಕಾರ ಅನುಧಾನ ಬಿಡುಗಡೆ ಮಾಡಿದ್ದು ಆಯ್ತು -ಆಗ ಎದುರಾದದ್ದು ಮೆಟ್ರೋ ಹಾದು ಹೋಗುವ ನೆಲ ಮಾರ್ಗದ ಒಡೆತನದ ಸಮಸ್ಯೆ -ಇಲ್ಲೂ ಒಮ್ಮೆಲೆ ಭೂಮಿ ಬೆಲೆ ಹೆಚ್ಚಿ ಮೂಲ ಒಡೆಯರಿಗಿಂತ ಅದನ್ನು ಖರೀದಿಸಿ ಮೆಟ್ರೋಗೆ ಮಾರಿದವರು ಧಿಡೀರ್ ಶ್ರೀಮಂತರದ್ರೂ -ಮೆಟ್ರೋಗೆ ಹಿಡಿ ಶಾಪ ಹಾಕದವರಿಲ್ಲ ..!! 

ಹಾಗೆ ನೆಲ ಕಳೆದುಕೊಂಡವ್ರು ಬೇರೆಡೆ ಗೊಣಗುತ್ತಾ ಹೋಗಿ ನೆಲೆಸಿದ್ದು ಆಯ್ತು ..ಈ ಮೆಟ್ರೋ ಹೇಗೆಲ್ಲಾ ರೂಪು ತಳೆಯಲಿದೆ ಎಂದು ಕುತೂಹಲದಿಂದ ನೋಡುತ್ತಿದುದು ಉಂಟು. ನಂತರ ನೆಲಕೆ ರಂದ್ರ ಕೊರೆದು ಮಣ್ಣು ಪರೀಕ್ಷೆ ಮಾಡಿ ಎಲ್ಲೆಲ್ಲಿ ಎಸ್ಟು ಭೂಮಿ ಬೇಕು -ಎಸ್ಟು ಅಡಿ ಎತ್ತರದ ಆಧಾರ ಕಂಬಕ್ಕೆ ಎಸ್ಟು ಅಡಿ ಆಳದ ಗುಂಡಿ ತೋಡಬೇಕು -ಎಂದೆಲ್ಲ ಅಂದಾಜ್ಸಿ ಕಾಮಗಾರಿ ನಡೆಯುವ ಸ್ಥಳದ ಸುತ್ತ ಮುತ್ತ ಅಡೆ ತಡೆ ಕಬ್ಬಿಣದ ಗೋಡೆ ನೆಟ್ಟಿದ್ದು ಆಯ್ತು .. 

ಆಗ ಶುರು ಆಯ್ತು ನೋಡಿ ಅಸಲಿ ಸಮಸ್ಯೆ ....!! 

ಟ್ರಾಫಿಕ್ ಜಾಮ್ , ಧೂಳು ,ದೊಡ್ಡ ದೊಡ್ಡ ಟ್ರಕ್ಕು -ಕ್ರೇನು -ಅಪಾರ ಕೆಲ್ಸಗಾರರ ಹಗಲು ರಾತ್ರಿ ಕೆಲ್ಸ ಶುರು ಆಗಿ - ಒಂದಾರು ತಿಂಗಳು ತೋಡಿದ ಆಳವಾದ ಗುಂಡಿಗಳಲ್ಲಿ ಕಬ್ಬಿಣ ಸಿಮೆಂಟು ಸೇರಿಸಿದ ಪಿಲ್ಳರುಗಳು ಎದ್ದು ನಿಂತವು -ಮೊದಲಿಗೆ ಹೈ ಫೈ ಏರಿಯಾ ಎಂದೋ ಏನೋ ಎಂಜಿ ರೋಡಿಗೆ ಮೊದಲ ಪ್ರಾಶಸ್ತ್ಯ ಸಿಕ್ಕು ಭರ್ಜರಿ ಕಾಮಗಾರಿ ನಡೆದು 3 -4 ವರುಷಗಳಲ್ಲಿ ಹಲವು ಘೋಷಿತ ಪೊಳ್ಳು ಪ್ರಕಟಣೆಗಳ ನಂತರ ಮೆಟ್ರೋ ಓಪನ್ ಆಗಿದ್ದು ಆಯ್ತು -

ಮೆಟ್ರೋಗೆ ರಾಜ್ಯ ಸರಕಾರದ ಕಡೆಯಿಂದ ಹೆಚ್ಚು ಅನುದಾನ ನೀಡಿದ ಮಾಜಿ ಮುಖ್ಯಮಂತ್ರಿ ಯೆಡಿಯೂರಪ್ಪ ಅವರನ್ನ ಸೌಜನ್ಯಕ್ಕೂ ಆಹ್ವಾನಿಸದೇ ಸದಾ ಆನಂದ ಗೌಡರು ಖುಷಿಯಿಂದ ಉದ್ಘಾಟಿಸಿ ಪ್ರಯಾಣಿಸಿ ಹೆಮ್ಮೆ ಪಟ್ಟಿದ್ದು ಆಯ್ತು  :(((

 

>>>ಇನ್ನೂ ಹೇಳೋದು ಬಾಕಿ ಇದೆ ...!!

ಮುಂದಿನ ಭಾಗದಲ್ಲಿ ನಿರೀಕ್ಷಿಸಿ ..!!

ಮಾಹಿತಿಗೆ  ಲಿಂಕ್ : 

http://en.wikipedia.org/wiki/Namma_Metro