'ನಲ್ಲೀ ತಾವ್ ನಂ ಮಲ್ಲೀ'

'ನಲ್ಲೀ ತಾವ್ ನಂ ಮಲ್ಲೀ'

ಬರಹ

'ನಲ್ಲೀ ತಾವ್ ನಂ ಮಲ್ಲೀ' 'ಶತಮಾನದ ಕಾವ್ಯ' ದಿಂದ, ಶ್ರೀ. ಜೀ.ಪಿ.ರಾಜರತ್ನಂ, ಅವರ ಕವಿತೆಗಳಲ್ಲಿ ನನಗೆ 'ಪ್ರಿಯವೆನಿಸಿದ' ಕೆಲವು ಪದ್ಯಗಳನ್ನು ಕೆಳಗೆ ಕೊಟ್ಟಿದ್ದೇನೆ. ಸಂಪಾದಕರು: ಶ್ರೀ. ಎಚ್. ಎಸ್. ವೆಂಕಟೇಶಮೂರ್ತಿಗಳು. ಹೆಸರಾಂತ ಕವಿ, ರಾಜರತ್ನಂ ಕವಿತೆಗಳಲ್ಲಿ ರಸಿಕತೆಗೇನೂ ಕಡಿಮೆ ಇಲ್ಲ ! ಮಲ್ಲಿಯ ಮೇಲಿನ ಪ್ರೀತಿ, ಗೌರವ, ಹಾಗೂ ಮೆಚ್ಚುಗೆಯನ್ನು ಅವರ ಕಾವ್ಯಗಳಲ್ಲಿ ಕಾಣಬಹುದು !


 "ನಲ್ಲೀ ತಾವ್ ನಂ ಮಲ್ಲೀ" ನಿಂತ್ರೊಂ ಚಂದ !


ಕುಂತ್ರೊಂ ಚಂದ !


ನಡೀತಾ ನಿದ್ರ್, ಒಂ ಚಂದ !


ಮಲ್ಲಿ ಚೌರ್ಗೆ ಬೆಳೆಗೋದ್ ಚಂದ !


ನೀರ್ ತುಂಬೋದೂ ಚಂದ !


ತುಂಬೀದ್ ಚೌರ್ಗೆನ್ ವೂ ಎತ್ ದಂಗೆ ಸೊಂಟ್ದಾಗ್ ಸಿಗ್ಸೋದ್ ಚಂದ !


ನಿರೀನ್ ಇಂಕ್ರ ನೆನೆಸ ದಂಗೇನೇ ಚಿಮ್ತಾ ಬರೋದೆ ಚಂದ !


ಮಲ್ಲಮ್ಮ- ನನ್ ಮಕ್ಕಳ್ ತಾಯಿ !


ಮಲ್ಲೀ- ನಂಗ್ ಔಳ್ ಯೆಂಡ್ರು !


ನಂ ಪ್ಯಾಟೇಗ್ ಔಳೇ ಪಾಳೇಗಾತಿ !


ಯಿಂತೋಳನ್ ಯಾರ್ ಕಂಡ್ರು !


ಮಿಕ್ಕೋರ್ ಯಾರಾರ್ 'ಮಲ್ಲೀಂ' ತಂದ್ರೆ ಅಲ್ ಉದರಿಸ್ ಬುಟ್ಟಾಳು !


ನಾನ್ ಅನಬೈದು - ನಂಗ್ ಅವಳ್ ಯೆಂಡ್ರು !


ಸಲ್ಗೆ- ನಂಗೆ ಏನ್ ಯೇಳು !