Skip to main content
ಕವನ
ನಲ್ಲೆ ನಿನ್ನ ಕಣ್ಣ ಕರೆಯು
ಕದಡಿತೆನ್ನ ಮನವನು
ಎದೆಯ ದುಗುಡ ೆಲ್ಲ ಮರೆತು
ಕಾಯುತಿರುವೆ ಬರವನು 1
ಆ ವಸಂತದ ಇರುಳಲಂದು
ಕೂಗಿ ಕರೆದೆ ನಲ್ಲನೆಂದು
ತಂಪುಗಾಳಿಯಂತೆ ಬಂದು
ಎದೆಯ ಕದವ ತೆರೆದೆ ಇಂದು
ಬರಡು ನೆಲದಾ ಕುಸುಮ ನಾನು
ಅರಳಿದಾಗಲೂ ಪಲವು ಏನು
ಗಂದದಾ ಕೊರಡು ನೀನು
ನಿನ್ನೊಳೇಕೋ ಬೆರೆತೆ ನಾನು
Comments
ಉ: ನಲ್ಲೆ ನಿನ್ನ ಕಣ್ಣ ಕರೆಯು