ನಲ್ಲೆ ಬ೦ಧ

ನಲ್ಲೆ ಬ೦ಧ

ಕವನ

ನಿನ್ನ ಮಾತು ಆಳದಲ್ಲಿ ಸರಾಗವಾಗಿ 
ನಡೆದಿದೆ
ನಲ್ಲೆ ಬ೦ಧ ಜಟಿಲಗೊ೦ಡು ಕಠಿಣವಾಗಿ ಹೋಗಿದೆ
ಕಾಠಿಣ್ಯ ಕರಗಿ ಸೊರಗಿದೆ

ಒರಗಿದಾಗ ಬರಿಯ ಕನಸು
ಕಣ್ಣ ತು೦ಬಿಕೊ೦ಡಿದೆ
ಎಚ್ಚರಾಗ ಕೂಡದೆ೦ದು
ಹುಚ್ಚು ಮನಸು ಬಯಸಿದೆ

ಕಷ್ಟದೊಳಗೆ ಇಷ್ಟ ತು೦ಬಿ
ತಟಸ್ತವಾಗಿ ನಿ೦ತಿಹೆ
ಸ್ಪಷ್ಟವಾಗಿ ಹೇಳೊ ಧೈರ್ಯ
ಒಳಗೆ ಇ೦ಗಿ ಹೋಗಿದೆ