ನಲ್ಲ ಇವ ಬಹನೆಂದು...
ಕವನ
ನಲ್ಲ ಇವ ಬಹನೆಂದು ಮೊಲ್ಲೆ ಮುಡಿದಿಹೆ ಇಂದು
ಇಲ್ಲೆ ಈಗಲೇ ಬಂದು ಬೆಲ್ಲವಡಗಿಹ ಸಿಹಿ- ಸೊಲ್ಲ ನುಡಿಯುವನೇ?
ಹರಳಿನುಂಗುರವ ಬೆರಳಿಗಿಟ್ಟೆ
ಸರಳ ಸರವೊಂದ ಕೊರಳಿಗಿಳೆಬಿಟ್ಟೆ
ಹಳದಿ ಸೀರೆಯನುಟ್ಟೆ ಹೊಳೆವ ಬಳೆಗಳನೂ ತೊಟ್ಟೆ;
ಬಳಿ ಸೆಳೆದೆದೆಗೆ ಎದೆಯನು ಕೊಟ್ಟು ದುಗುಡ ಕಳೆಯುವನೇ?
ಸತಿ-ಪತಿ-ಸುತರ ಜಗದೊಳೊಂದಾಗಿ
ಮತಿ ಇಟ್ಟು ಜಗಪತಿಯೊಳಗಿವನು ಜತನ ಮಾಡುತ ನನ್ನ,
ಜೀವನ ಪಥದಲ್ಲಿ ಅತಿಮಾಡದೇ ಎಲ್ಲು,
ನನ್ನೊಡನೆ ಎಂದೆಂದು ಜೊತೆ-ಜೊತೆಗೆ ನಡೆಯುವನೇ? -ಮಾಲು