ನವಣೆ ಕಟ್ಲೆಟ್

ನವಣೆ ಕಟ್ಲೆಟ್

ಬೇಕಿರುವ ಸಾಮಗ್ರಿ

ಬೇಯಿಸಿದ ಬಟಾಟೆ ೫, ಬೇಯಿಸಿದ ನವಣೆ ೪ ಚಮಚ, ಚಾಟ್ ಮಸಾಲ ಅರ್ಧ ಚಮಚ, ಮೆಣಸಿನ ಪುಡಿ ಅರ್ಧ ಚಮಚ, ಹೆಚ್ಚಿದ ಹಸಿಮೆಣಸು ೧ ಚಮಚ, ಕೊತ್ತಂಬರಿ ಸೊಪ್ಪು ೨ ಚಮಚ, ಹೆಚ್ಚಿದ ಬೇವಿನ ಸೊಪ್ಪು ೩ ಚಮಚ, ರುಚಿಗೆ ಉಪ್ಪು, ಅರ್ಧ ಚಮಚ ತುರಿದ ಶುಂಠಿ, ಚಿಟಿಕೆ ಇಂಗಿನ ಹುಡಿ, ಹುರಿದ ಬೊಂಬಾಯಿ ರವೆ ೪ ಚಮಚ

ತಯಾರಿಸುವ ವಿಧಾನ

ಬೊಂಬಾಯಿ ರವೆಯನ್ನು ಹೊರತು ಪಡಿಸಿ ಎಲ್ಲಾ ಸಾಮಗ್ರಿಗಳನ್ನು ಚೆನ್ನಾಗಿ ಮಿಶ್ರ ಮಾಡಬೇಕು. ಆಮೇಲೆ ಉಂಡೆ (ಚಪಾತಿ ಉಂಡೆಗಾತ್ರ) ಮಾಡಿ ಬೊಂಬಾಯಿ ರವೆಯಲ್ಲಿ ಉರುಳಿಸಿ ತಟ್ಟಿ ಕಾವಲಿಯಲ್ಲಿ೨ ಬದಿ ಬೇಯಿಸ ಬೇಕು. ಸ್ವಲ್ಪ ತುಪ್ಪ ಅಥವಾ ಎಣ್ಣೆ ಬಳಸಬಹುದು. ಚಟ್ನಿ ಅಥವಾ ಟೊಮ್ಯಾಟೊ ಕೆಚಪ್ ನೊಂದಿಗೆ ತಿನ್ನಲು ಬಲು‌ರುಚಿ.

-ಅಶ್ವಿನಿ ಮೂರ್ತಿ ಅಯ್ಯನಕಟ್ಟೆ