ನವೆಂಬರ ೧ರಂದು ವಿಕಿಪೀಡಿಯಾದ ಮುಖ್ಯಪುಟದಲ್ಲಿ ಕರ್ನಾಟಕ
ಅಂತರ್ಜಾಲ ಬಳಸುವ ಬಹುತೇಕ ಎಲ್ಲರಿಗೂ ವಿಕಿಪೀಡಿಯಾ ಬಗ್ಗೆ ತಿಳಿದೇ ಇರುತ್ತದೆ.ಅಂತರ್ಜಾಲದ ಪ್ರಮುಖ ವೆಬ್-ಸೈಟ್‌ಗಳಲ್ಲಿ ಒಂದಾದ ಆಂಗ್ಲ ವಿಕಿಪೀಡಿಯಾದಲ್ಲಿ ಸುಮಾರು ೨೦ ಲಕ್ಷಕ್ಕೂ ಹೆಚ್ಚು ಲೇಖನಗಳಿವೆ.ಗೂಗಲ್,ಯಾಹು ಮುಂತಾದ ಸರ್ಚ್-ಇಂಜಿನ್‌ಗಳಲ್ಲಿ ಹುಡುಕಿದಾಗ,ಸಾಮಾನ್ಯವಾಗಿ ವಿಕಿಪೀಡಿಯಾ ಲೇಖನಗಳು ಮೊದಲ ಹತ್ತು ಸರ್ಚ್-ರಿಸಲ್ಟಗಳಲ್ಲಿ ಬಂದೇ ಬರುತ್ತದೆ.ಈ ದೃಷ್ಟಿಯಿಂದ ನೋಡಿದರೆ, ವಿಕಿಪೀಡಿಯಾ ಲೇಖನವು ವಿಷಯಾಸಕ್ತರಿಗೆ ಮಾಹಿತಿಯ ಮೊದಲ ಕೊಂಡಿಯಾಗಿರುತ್ತದೆ. ವಿಕಿಪೀಡಿಯಾದಲ್ಲಿ ಲೇಖನಗಳ ಗುಣಮಟ್ಟವನ್ನಾಧರಿಸಿ ಅವುಗಳನ್ನು ಶ್ರೇಣಿಕರಿಸಲಾಗುತ್ತದೆ. ಈ ರೀತಿ ಉತ್ಕೃಷ್ಟ ಲೇಖನಗಳನ್ನು "Featured Articles" ಎಂದು ಕರೆಯುತ್ತಾರೆ. ಭಾರತದ ಬಗೆಗಿನ ಲೇಖನಗಳ ಪೈಕಿ ಕನ್ನಡ-ಕರ್ನಾಟಕ ಬಗೆಗಿನ ಲೇಖನಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಈ ಶ್ರೇಣಿಗೆ ಸೇರುತ್ತವೆ. ಕಳೆದ ಒಂದು ವರ್ಷದಲ್ಲಿ ಕನ್ನಡ-ಕರ್ನಾಟಕದ ಬಗೆಗಿನ ಲೇಖನಗಳು ಇನ್ನುಳಿದ ಭಾರತೀಯ ಲೇಖನಗಳಿಂತ ಹೆಚ್ಚಾಗಿ Featured ಆಗಿವೆ. ವಿಕಿಪೀಡಿಯಾದ ಹಲವಾರು ಕನ್ನಡಿಗ ಲೇಖಕರ ಸಕ್ರಿಯ ಚಟುವಟಿಕೆಯಿಂದ ಕರ್ನಾಟಕದ ಇತಿಹಾಸವನ್ನು ಸಾರುವ ಬಹುತೇಕ ಎಲ್ಲಾ ಲೇಖನಗಳು "Featured" ವರ್ಗಕ್ಕೆ ಸೇರಿದೆ. ಇಂತಹ "Featured" ಲೇಖನಗಳನ್ನು ವಿಕಿಪೀಡಿಯಾದ ಮುಖ್ಯಪುಟದಲ್ಲಿ ಪ್ರಕಟಿಸಲಾಗುತ್ತದೆ. ಇದಲ್ಲೆದೆ, ವಿಕಿಪೀಡಿಯಾದ ಮುಖ್ಯಪುಟದಲ್ಲಿ ಬರುವ "Did you know" (ನಿಮಗಿದು ಗೊತ್ತೆ) ಅಂಕಣದಲ್ಲಿ ವಾರಕ್ಕೆ ಕನಿಷ್ಟ ೨-೩ ಬಾರಿಯಾದರೂ ಕನ್ನಡ-ಕರ್ನಾಟಕದ ಲೇಖನಗಳು ಪ್ರಕಟಗೊಳ್ಳುತಿರುತ್ತವೆ.
ಇನ್ನು ನವೆಂಬರ್ ೧ರ ವಿಶೇಷವೆಂದರೆ, "Karnataka" ಲೇಖನವನ್ನು ಅತ್ಯುತ್ತಮ ಲೇಖನ ಎಂದು ತೀರ್ಮಾನಿಸಿರುವ ವಿಕಿಪೀಡಿಯ ಸಮುದಾಯ ನವೆಂಬರ್ ಒಂದರಂದು ಕರ್ನಾಟಕದ ಬಗೆಗಿನ ಆ ಲೇಖನ ಅಂದು ವಿಕಿಪೀಡಿಯಾದ ಮುಖ್ಯಪುಟದಲ್ಲಿ ಪ್ರಕಟಿಸಲಿದೆ. ೨೦೦೪ರಲ್ಲಿ ಬೆಂಗಳೂರಿನ ಲೇಖನ ಪ್ರಕಟವಾದ ನಂತರ, ಇದೇ ಮೊದಲ ಬಾರಿಗೆ ಕನ್ನಡ-ಕರ್ನಾಟದ ಒಂದು ಲೇಖನ ವಿಕಿಪೀಡಿಯಾದ ಮುಖ್ಯಪುಟದಲ್ಲಿ ಪ್ರಕಟಗೊಳ್ಳಲಿದೆ. ದಯವಿಟ್ಟು ರಾಜ್ಯೋತ್ಸವದ ದಿನದಂದು ವಿಕಿಪೀಡಿಯ ಮುಖಪುಟವನ್ನ ನೋಡಲು ಮರೆಯಬೇಡಿ.ನಿಮ್ಮ ಸ್ನೇಹಿತರಿಗೂ ಈ ಬಗ್ಗೆ ತಿಳಿಸಿ.
ಮುಖಪುಟದಲ್ಲಿ ಪ್ರಕಟವಾಗುತ್ತಿರುವ ಲೇಖನದ ಕೊಂಡಿ : http://en.wikipedia.org/wiki/Karnataka
ನವೆಂಬರ ೧ರಂದು ನೋಡಬೇಕಾದ ವಿಕಿಪೀಡೀಯಾದ ಮುಖ್ಯಪುಟದ ಕೊಂಡಿ: http://en.wikipedia.org/wiki/Main_Page