ನಾಚಿಕೆ ಇಲ್ಲದ ಸಾಲುಗಳು

ನಾಚಿಕೆ ಇಲ್ಲದ ಸಾಲುಗಳು

ವಸ್ತುಗಳನ್ನು ಹುಟ್ಟು ಹಾಕುವುದು,,
ಮತ್ತು 
ಆ ವಸ್ತುವನ್ನು ಮಾರುವುದು,,,
ಇದನ್ನಷ್ಟೇ ಕಲಿಸಿಕೊಡುವುದೇ
 
ಇಂದಿನ ಶಿಕ್ಷಣ,,,

***********************************
ಮದುವೆಯ ನಂತರವೂ 

ತನ್ನ ತನವನ್ನು ಉಳಿಸಿಕೊಳ್ಳುವ 
ಹೆಣ್ಣು "ಗಂಡು ಬೀರಿ" ಎಂಬ 
ಪಟ್ಟ ಕಟ್ಟಿಕೊಳ್ಳುತ್ತಾಳೆ,,,

ತನ್ನ ತನವನ್ನು ಉಳಿಸಿಕೊಳ್ಳದ 
ಗಂಡು "ಅಮ್ಮಾವ್ರ ಗಂಡ" ಎಂಬ
ಪಟ್ಟ ಕಟ್ಟಿಕೊಳ್ಳುತ್ತಾನೆ,,,

***********************************
ಪದಗಳಲ್ಲಿ ಅಡಗಿದ 
ಸಿದ್ದಾಂತಗಳ ತಳದ ಮೇಲೆ.
ಅರ್ತೈಸಿಕೊಳ್ಳುವ ಮನಸುಗಳ 
ಸವಾರಿ,,,ತಮಗೆ ಬೇಕಾದಂತೆ,,

ಒಂದೇ ಪದವನ್ನು
ಸಾವಿರ ಮನಸುಗಳು  
ಸಾವಿರ ರೀತಿಯಲ್ಲಿ ಅರ್ಥೈಸಿಕೊಳ್ಳಬಲ್ಲವು 

ನೈಜತೆಯ ಸಾವು ಇನ್ನೆಲ್ಲೂ ಇಲ್ಲ,,,,
ಅದು ಇರುವುದು
ಅರ್ಥೈಸಿಕೊಳ್ಳುವ ಮನದ 
ತೀಕ್ಷ್ಣತೆಯ ಬುದ್ದಿವಂತಿಕೆಯಲ್ಲಿ,,,,,

***********************************
ಸತ್ಯ ಎನ್ನುವುದು ನೀರಿನಂತೆ.

ಕೊಳಾಯಿಯ ನೀರು, ಕೊಳಾಯಿಯಂತೆ
ಲೋಟದ ನೀರು, ಲೋಟದಂತೆ
ಆಕಾರ ಪಡೆದ ಹಾಗೆ,,,,,

ಸತ್ಯವೂ 
ಅರಿತ ಮನಸುಗಳ ರೂಪವನು
ಪಡೆದು ಸುಮ್ಮನಾಗಿಬಿಡುತ್ತದೆ.
ಯಾವ ವ್ಯಾಕ್ಯನವೂ ಇದಕ್ಕಿಲ್ಲ,,,

***********************************
ಹೊಟ್ಟೆ ಪಾಡಿಗೆ ನಮ್ಮ ರಕ್ತ ಹೀರುವ 
ಸೊಳ್ಳೆಗೂ,,,,,
ನಮ್ಮ ತಿಮಿರಕ್ಕೆ ಪ್ರಕೃತಿಯ ಕತ್ತು ಹಿಚುಕುವ
ನಮಗೂ,,,, 
ಸರಿ ಯಾರೆಂದು ಪಂದ್ಯವಿತ್ತರೆ 
ಗೆಲ್ಲುವುದು ಸೊಳ್ಳೆಯೆ,,,,
ನಾವಲ್ಲ,,,,

***********************************
ನಾಳೆ ನನ್ನದೆಂದು ನಂಬಿ
ನಾಯಿಯಂತೆ ಬೆನ್ನು ಬಾಗಿಸಿ.
ಗುಡಾಣ ಹೊಟ್ಟೆಯ ಬೆಳಸಿ.
ಇದ್ದೆರಡು ಕಣ್ಣುಗಳನು 
ಮಂಜು ಮಾಡಿಕೊಂಡು
ಕಂಪ್ಯೂಟರಿನ ಮುಂದೆ 
ಕುಳಿತ ನನಗೂ,,,,

ಬಾಲಕ್ಕೆ ಡಬ್ಬ ಕಟ್ಟಿ
ಓಡುವ ಕತ್ತೆಗೂ, ವ್ಯತ್ಯಾಸವಿದೆಯೇ ?

ಇಬ್ಬರೂ ಓಡುತ್ತಿದ್ದೇವೆ, ಎಂದೂ ಕಾಣದ 
ಬದುಕಿನೆಡೆಗೆ.

***********************************
ಕೆಂಪು ಗುಲಾಬಿಗೆ, 
ಪ್ರೇಮದ ಸಂಕೇತವೆಂಬ 
ಹಣೆಪಟ್ಟಿ ಕಟ್ಟಿ,,,,,
ಗಿಡಕ್ಕೂ ದಕ್ಕದಂತೆ ಕಿತ್ತು 
ತಂದ ಆಧುನಿಕ ಪ್ರೇಮಿಗಳ,,,,
ಪ್ರೀತಿ,,,,,
ನಿಜವಾಗಿಯೂ, 
ಹೂವಿನಷ್ಟಾದರೂ ಬೆಲೆ ಬಾಳಿತೆ ?

***********************************
ಜೈಲು ಪಾಲದ ಕೈದಿಯ 
ಕಣ್ಣುಗಳನು ಓದಿ ನೋಡಬೇಕು,
ಅದನ್ನು ಮಾಡುವೆವಾದರೆ,,,
ಯಾವ ಕೋರ್ಟುಗಳೂ 
ಪ್ರಯೋಜನಕ್ಕೆ ಬಾರವೂ

***********************************
ದಾರಿ ಬದಿಯ ಸ್ವಚ್ಚ 
ಹಸಿರು ಗಿಡಕ್ಕೂ 
ಮನೆಯ ಕುಂಡದ ಒಳಗಿನ 
ಬೋನ್ಸಾಯ್ ಗಿಡಕ್ಕೂ 

ಇರುವ ವ್ಯತ್ಯಾಸ 

"ಬರಿಯ ಸ್ವಾತಂತ್ರ್ಯ"

***********************************
ಬದುಕಿನ ಪ್ರಥಮಾರ್ಧದಲ್ಲಿ 
ಬದುಕಿನ ದ್ವಿತಿಯಾರ್ಧದ ಬಗ್ಗೆ 
ಭಯ ಹುಟ್ಟಿಸುವ ಕೆಲಸವನ್ನು
ನಮ್ಮ ಪೋಷಕರು,,, ಮಾಡದೇ ಇದ್ದಿದ್ದರೆ.

ನಾವೂ ಬೆಳೆಯುತ್ತಿದ್ದೆವು,,,
ನಮ್ಮದೇ ಹಾದಿಯಲ್ಲಿ,,,,

-- ಜೀ ಕೇ ನ