ನಾನು ಒಪ್ಪಲೇನಿದೆ

ನಾನು ಒಪ್ಪಲೇನಿದೆ

ಕವನ

ನಾನು ಒಪ್ಪಲೇನಿದೆ

ಈ ಭೂಮಿಯ

ನಾ ಬುವಿಗೆ ಬಂದಾಗಲೆ

ಬಿಗಿದಪ್ಪಿ ಮುದ್ದಿಸಿದೆ

ಹರಸಿ ಸಲಹಿದೆ

ಜೀವನದ ದಾರಿಯ ತೋರಿಸಿ

ತಾನು ಮರೆಯಲ್ಲಿ ನಿಂತಿದೆ !

 

ನನ್ನ ತಪ್ಪುಗಳ ಹೇಳುತ್ತಾ

ಒಪ್ಪ ದಾರಿಯಲ್ಲಿ ನಡೆಸಿದೆ

ಬೆಪ್ಪನಂತ್ತಿದ್ದ ನನಗೆ

ಮರುಜನುಮ ನೀಡಿದೆ

ಕನಸುಗಳ ಕಳಕೊಂಡ ನನಗೆ

ಮತ್ತೆ ಕನಸಿನ ಜೊತೆಗೆ

ನನಸುಗಳ ಕೊಟ್ಟಿದೆ !

 

ಎಡರು ತೊಡರುಗಳ ಎಡೆಯೆ

ಸರಿ ದಾರಿಯನು ತೋರಿದೆ

ಹಿಂಸೆಯ ದಾರಿಯ ತುಳಿದವಗೆ

ಅಹಿಂಸೆಯ ಮಾರ್ಗವ ತೋರಿಸಿದೆ

ಕಷ್ಟವ ಅರಿತು ಬಾಳುವುದರ

ಮನದಾಳದೊಳಗೆ ಅರುಹಿದೆ

 

ಈ ಬುವಿಯೆ ಸ್ವರ್ಗವಾಗಿಹುದೆನಗೆ

ಎಲ್ಲವನ್ನೂ ಕಲಿತು ಬೆಳೆದವನು

ಸತ್ಯತೆಯ ನಡುವೆ ನಡೆದವನು

ಸ್ನೇಹತ್ವದ ನಡುವೆ ಬಾಳಿದವನು

ಹೀಗೆಯೇ ಇರಲಿ ಜೀವನ ಸಂಭ್ರಮವು

ಬಾಳ ಪಲ್ಲವಿಯು ಸರ್ವಭವತತ್ವವು

 

-ಹಾ ಮ ಸತೀಶ ಬೆಂಗಳೂರು

 

ಚಿತ್ರ್