ನಾನು ನಾನೆನೆ ಅದು ನಾನಲ್ಲ By nanjunda on Fri, 04/06/2012 - 16:00 ಕವನ ನಾನು ನಾನೆನೆ ಅದು ನಾನಲ್ಲ, ನಾನು ತಾನನವೆನೆ ಅದು ನಾನು.ತನ್ನಿರವ ಮರೆವ ತಾನನವೆ ನಾನು.ತನುವಲ್ಲ ಮನವಲ್ಲ ನೋವುನಲಿವಲ್ಲ ತನುಮನದಿರವ ಮರೆತರಿವು ನಾನು.ಗುರುಪದದ ಸಂಚರವು, ಗುರುಪದದ ಇಂಚರವು ಗುರುಪದದ ಅರಿವೆ ನಾನು.ಅರಿವೆ ಗುರುಪದದಿಂಚರವ ಮರೆವೆ ಚರದಿರವ ನಾನು. Log in or register to post comments