ನಾನು ನೀನು

ನಾನು ನೀನು

ಕವನ

ಮೊಗ್ಗು,  ಬಿರಿದ ಹೂ

ಗಂಧ ಇದ್ದರೆ ತೋಟ,

ನಾನು ನೀನು ಸೇರಿದರೆ,

ನೋವು ನಲಿವುಗಳ ಮಾವು ಬೇವು.

 

ಕಳೆ ಕಿತ್ತ ಹೊಲ,

ಮಳೆ ಬಿದ್ದ  ನೆಲ.

ನಾನು ನೀನು ಒಂದಾಗಿ,

ಐಕ್ಯವಾಗಿರೆ, ಒಲವು ಚೆಲುವು.

 

ಎಲೆ ಅಡಿಕೆ ಸುಣ್ಣ, 

ತಿಂದರೆ, ಕೆಂಪಾ  ಬಣ್ಣ. 

ನಾನು ನೀನು ನಾವಾದಾಗ, 

ನದಿಯ ಮೇಲಣ ನಾವೆಯ ಪಯಣ.

 

ಒಂಟಿ ನಿದ್ದೆಯ ಹಾಸಿಗೆ,

ಬಿರು  ಬಿಸಿಲ ಬೇಸಿಗೆ.

ನೀ ನನ್ನಿಂದ ದೂರಾಗಿರಲ್,

ಒಂದೆ ಚಕ್ರದ ನಗ್ನ ಸಾಹಸ.

 

ಹಾಲು ತುಪ್ಪದಿಂ  ಹೋಳಿಗೆ,

ಅಕ್ಷರದಿಂ,ಅಕ್ಷಯ ಜೋಳಿಗೆ.

ನಿನ್ನ  ನನ್ನ  ಆಲಿಂಗನ,

ಭುವಿಗೆ ಮುಂಗಾರ  ಚುಂಬನದ ಆಗಮನ.

 

ನೀ ಇಲ್ಲದಾಗಿನ ಕಾತುರ,

ಕೂಡಿ ನಲಿವ ಆತುರ.

ಪ್ರತಿ ರಾತ್ರಿ ಸೇರುವ,ನಾನು ನೀನು,

ಸಿಹಿಯಾಗಿ ಬೆರೆವ ಹಾಲು ಜೇನು.

 

ಜ್ಯೋತಿ ಕುಮಾರ್.ಎಂ(ಜೆ.ಕೆ.)