ನಾನು ಮತ್ತು ನೀನು
ಬರಹ
ನಾನು ಮತ್ತು ನೀನು
ಬೇರೆ ಇಲ್ಲ ಏನೂ
ದೂರವಿರುವೆ ಏಕೆ?
ಬಾ ಸನಿಹಕೆ
ಮಾತು ಬಾರದೇಕೆ?
ಮೌನವೀಗ ಬೇಕೆ?
ಒಮ್ಮೆ ನುಡಿದು ನೋಡು
ಮುತ್ತು ಸುರಿವುದು
ನಿನ್ನ ತಾಳಕೆ ನಾ
ರಾಗವೆಳೆಯುವೆ
ನಿನ್ನ ಧ್ವನಿಗೆ ನನ್ನ ಧ್ವನಿಯ
ಶೃತಿಯಗೊಳಿಸುವೆ
ನಿನ್ನ ತಂತಿ ಮೀಟುವೆ ನಾ
ನನ್ನ ಬೆರಳಲಿ
ನನ್ನ ಮನವ ಕಾಡುವೆ ನೀ
ನಿನ್ನ ಸ್ವರದಲಿ
ನೀ ಬಾ
ಈಗ ಸುಮ್ಮನೆ
ನನ್ನ ಜೊತೆಯಲಿ..
ನಿನ್ನ
ಜೊತೆಯಲೇ
ಮುಳುಗುವೆ
ನಾ ಹಾಡಲಿ..