ನಾಯಿಮರಿ ಲಿನಕ್ಸ್ ಅಥವಾ ಮುದ್ದುಕುನ್ನಿ ಲಿನಕ್ಸ್
ಬರಹ
ನಾಯಿಮರಿ ಲಿನಕ್ಸ್ ಅಥವಾ ಮುದ್ದುಕುನ್ನಿ ಲಿನಕ್ಸ್
ಈಗ ವಿಂಡೋಸ್ ತಂತ್ರಾಂಶದಂತೆ ಕ್ಲಿಕ್ ಮಾಡಿ ಉಪಯೋಗಿಸಬಹುದಾದ ಲಿನಕ್ಸ್ ಇದು. ಇದನ್ನು ಅಂತರ್ಜಾಲದಲ್ಲಿ ಉಚಿತವಾಗಿ ಡೌನ್ಲೋಡ್
ಮಾಡಬಹುದು. ಇದನ್ನೊಮ್ಮೆ ಸಿ.ಡಿ ಯಲ್ಲಿ ಬರೆದರಾಯಿತು. ಬೇಕಾದಾಗ ಸಿ.ಡಿ ಲೋಡ್ ಮಾಡಿ ನಿಮ್ಮ ಕೆಲಸ ಮಾಡಬಹುದು. ಕೇವಲ ೭೦ ಎಂ.ಬಿ. ಇರುವ
ಈ ಲಿನಕ್ಸ ನಲ್ಲಿ ಅಬಿ ವರ್ಡ್, ಅಂತರ್ಜಾಲಸುತ್ತಲು ಬೇಕಾಗುವ ಎಲ್ಲ ಪ್ರೊಗ್ರಾಮ್ ಗಳನ್ನೂ ಹೊಂದಿದೆ. ವಿಂಡೋಸ್-೯೫/೯೮ನ್ನು ಉಪಯೋಗಿಸಿದವರಿಗೆ
ಇದು ಬಹಳ ಸುಲಭ. ಹಳೆಯ ಕಂಪ್ಯುಟರ್ ಗಳಲ್ಲೂ ಸುಲಭವಾಗಿ ಕೆಲಸ ಮಾಡುತ್ತದೆ. ನೀವೂ ಒಂದು ಸಲ ಪ್ರಯತ್ನಿಸಿ ನೋಡಿ. ಇದರ ಲಿಂಕ್
www.puppylinux.org
ಕೊನೆಯ ಮಾತು. ಕನ್ನಡದಲ್ಲಿ ಆಸಕ್ತಿ ಉಳ್ಳ ತಂತ್ರಜ್ಞರು ಇದನ್ನು ಕನ್ನಡಕ್ಕೆ ತರ್ಜುಮೆ ಮಾಡಬಹುದು. ಇದು ಈಗಾಗಲೇ ಚೈನೀ, ವಿಯತ್ನಾಮಿ, ಜರ್ಮನ್ , ರಶ್ಯನ್, ಮತ್ತಿತರ ಭಾಷೆಗಳಲ್ಲಿ ಲಭ್ಯವಿದೆ.