ನಾಯೀ ನನ್ನ ಒಲವಿನ ನಾಯಿ..

ನಾಯೀ ನನ್ನ ಒಲವಿನ ನಾಯಿ..

ಕವನ

ಬಂಧನ ಚಿತ್ರದ ಬಣ್ಣ ನನ್ನ ಒಲವಿನ ಬಣ್ಣ ಹಾಡಿಗೆ ಸಾಹಿತ್ಯ ಬದಲಿಸಿ ಬರೆದಿದ್ದೇನೆ..ಇದು ಕೇವಲ ಹಾಸ್ಯಕ್ಕಾಗಿ...


ನಾಯೀ..ಈ..ಈ  ನನ್ನ ಒಲವಿನ ನಾಯಿ..

ನನ್ನ ಪ್ರೀತಿಯ ನಾಯೀ...ನನ್ನ ಮುದ್ದಿನ ನಾಯೀ..

ನೀ ಬೌ ಬೌ ಬೊಗಳು..ಜೋರಾಗಿ ಬೊಗಳು...ನೂರಾರು ಬ್ರೀಡಿನ ನಾಯೀ...

ನಾಯೀ...ನಾಯೀ...ನಾಯೀ...ನಾಯೀ...


ನಾಯೀ..ಈ..ಈ  ನನ್ನ ಒಲವಿನ ನಾಯಿ..

ನನ್ನ ಪ್ರೀತಿಯ ನಾಯೀ...ನನ್ನ ಮುದ್ದಿನ ನಾಯೀ..

ನೀ ಬೌ ಬೌ ಬೊಗಳು..ಜೋರಾಗಿ ಬೊಗಳು...ನೂರಾರು ಬ್ರೀಡಿನ ನಾಯೀ...

ನಾಯೀ...ನಾಯೀ...ನಾಯೀ...ನಾಯೀ

ಈ ನೀಲಿ ಮೋಹಕ ಕಣ್ಣ..ಚೆಲುವಲ್ಲಿ ನಿಂತಿರೋ ನಾಯೀ..

ರಂಗಾದ ಮೈಯ್ಯ ತುಂಬಾ ಕೂದಲಿರೋ ಮುದ್ದಿನ ನಾಯೀ...

ನಾ ತಂದೆ ಪೆಡಿಗ್ರೀ ಇಂದು..ನಿನಗಾಗಿ ತಿನ್ನು ನಾಯೀ..

ಮನೆ ಮುಂದೆ ತೋಟದಲ್ಲಿ ಹೊಸ ಗೂಡು ಕಟ್ಟಿದೆ ನಿನಗೆ..

ಕಂಬ ಕಂಡ ಕಡೆ ಕಾಲು ಎತ್ತಬೇಡವೋ..ಮನೆಗೆಂದು ಬಂದವರ ಕಚ್ಚಬೇಡವೋ..

ನೀನು ಕಚ್ಚಿದರೆ ಸೂಜಿಯಂತು ಗ್ಯಾರಂಟಿ..ಹೆಚ್ಚು ಕಮ್ಮಿ ಆದರೆ ಹೊಗೆ ಗ್ಯಾರಂಟಿ..


ನಾಯೀ...ನಾಯೀ...ನಾಯೀ...ನಾಯೀ

ಮಾನವನಿಗಿಂತ ನೀನು ಅತಿಯಾದ ನಿಯತ್ತಿನ ನಾಯೀ..

ಕಳ್ಳರನು ಹುಡುಕುವ ನೀನು ಪೋಲೀಸರ ಪ್ರೀತಿಯ ನಾಯೀ..

ಮೂಳೆಯನ್ನು ಕೊಟ್ಟರೆ ಸಾಕು ಮನೆಯನ್ನು ಕಾಯುವೆ ನೀನು..

ಮನೆಯವರೇ ಆದರೂನೂ ಒಮ್ಮೊಮ್ಮೆ ಬೊಗಳುವೆ ಏಕೆ?

ಯಾರ ಕಂಡರೂನು ನೀನು ಕಚ್ಚಲು ಹೋಗುವೆ..

ಕಲ್ಲಿನಲ್ಲಿ ಹೊಡೆದರೆ ನೀನು ಕುಯ್ ಗುಟ್ಟುವೆ..

ಚಿಕ್ಕ ಚಿಕ್ಕ ಮಕ್ಕಳನ್ನೆಲ್ಲ ಕಚ್ಚುವೆ ನೀ ಯಾಕೆ..

ಏನೇ ಆದರೂನು ನಾಯೀ ನೀನು ನಾಯಿಯೇ...

ನಾಯೀ...ನಾಯೀ...ನಾಯೀ


ನಾಯೀ..ಈ..ಈ  ನನ್ನ ಒಲವಿನ ನಾಯಿ..

ನನ್ನ ಪ್ರೀತಿಯ ನಾಯೀ...ನನ್ನ ಮುದ್ದಿನ ನಾಯೀ


ನೀ ಬೌ ಬೌ ಬೊಗಳು..ಜೋರಾಗಿ ಬೊಗಳು...ನೂರಾರು ಬ್ರೀಡಿನ ನಾಯೀ...

ನಾಯೀ...ನಾಯೀ...ನಾಯೀ...ನಾಯೀ...

Comments