ನಾಳೆಯಾಗಿದ್ದ ಈದಿನ
ಕವನ
ಇಂದೋ ನಾಳೆಯೋ
ಅಥವ ಇಂದಾಗಲಿರುವ ನಾಳೆಯೋ ,
ನಾಳೆಯ ಹಿಂದೋ..
ಅಂತೂ
ಇಂದಾಗಿದ್ದ ನಿನ್ನೆಯಿಂದ,
ನಾಳೆಯಾಗಿದ್ದ ಇಂದಿನವರೆಗೂ
ಕಾದಿದ್ದಾಯ್ತು.
ಕೊನೆಗೆ ಇಂದಾಗಲಿದ್ದ
ನಾಳೆಯೂ ಬಂದಾಯ್ತು,
ಆದರೂ ಮನಸೊಳಗಿನ ದುಗುಡ
ಕಡಿಮೆ ಆಗಲಿಲ್ಲ.
ಮೊನ್ನೆ, ನಿನ್ನೆ ಇಂದಿನ
ಕಾತರ ಮುಗಿದು
ನಾಡಿದ್ದು ನಾಳೆಯಾಗಿ ಇಂದಾದರು
ಸ್ನೇಹ ಹಸ್ತವ
ನನ್ನೆಡೆಗೆ ಚಾಚಲೇ ಇಲ್ಲ.
:ಮಂಸೋರೆ
Comments
ಉ: ನಾಳೆಯಾಗಿದ್ದ ಈದಿನ
In reply to ಉ: ನಾಳೆಯಾಗಿದ್ದ ಈದಿನ by Mohan Raj M
ಉ: ನಾಳೆಯಾಗಿದ್ದ ಈದಿನ
ಉ: ನಾಳೆಯಾಗಿದ್ದ ಈದಿನ