ನಾಳೆ ಎಂಬುದು ಬರತೈತಿ…
ಕವನ
ಕಾಣುವೆ ನಿನೊಂದು ಕನಸು
ನನಸಾಗಲಿಲ್ಲ ನನ್ನ ಕನಸು
ನಾಳೆಯ ಬಗ್ಗೆ ಮುನಿಸು
ಬರುವುದೊ ಇಲ್ಲವೊ ತಿಳಿಸು
ನಾಳೆ ಎಂಬುದು ಬರತೈತಿ
ನಿನ್ನೆ ಎಂಬುದು ಮರಸೈತಿ
ಬದುಕು ಎಂಬುದು ಸಾಗೈತಿ
ಬದುಕಿನ ಬಂಡಿ ಹೊಂಟೈತಿ
ಕನಸೊಂದು ಶುರುವಾಗಿ
ಗುರಿಯ ಕಡೆಗೆ ತಾ ಬಾಗಿ
ದ್ವೇಷ ಮತ್ಸರದಿಂದ ಸಾಗಿ
ಕಡೆಗೆ ಏನು ಗೊತ್ತಿಲ್ಲದಂತಾಗಿ
ಯಾರು ಕಂಡಾರ ನಾಳೆ
ನಾಳೆ ಇರುತ್ತೀರಾ ಹೇಳಿ
ಸಂಸಾರದಲ್ಲಿ ಬೀಸಿದೆ ಗಾಳಿ
ನಮಗೆ ಖಾತ್ರಿಯಿಲ್ಲದ ನಾಳೆ
ಅಹಂಕಾರ ಬಿಟ್ಟು ಬಿಡು
ಮತ್ಸರ ಬೇಡ ಬಿಡು
ಸರ್ವರನ್ನು ಪ್ರೀತಿ ಮಾಡು
ಪ್ರಾಣಿ ಪಕ್ಷಿ ಮರ ಸಂರಕ್ಷಣೆ ಮಾಡು
-ಶ್ರೀ ಹುಚ್ಚೀರಪ್ಪ ವೀರಪ್ಪ ಈಟಿ, ಗಜೇಂದ್ರಗಡ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್