ನಾವಿರೊದು ಇಂಗೆಯ !
ನಾವ್ಯಾಕ್ ಹೀಗೆ ಅಂತ ನಮಗೆಲ್ಲ ಒಂದ್ಸರ್ತಿಆದ್ರು ಅನ್ಸೊದ್ ಸಹಜ. ಯೇನ್ ಮಾಡೊದ್ ಹೇಳಿ. ನಮ್ ರಾಜ್ಯದ ಪರಿಸ್ಥಿತಿ, ಸರ್ಯಾಗ್ ಹೇಳ್ಬೇಕು ಅಂದ್ರೆ. ನಮ್ ದೊಗ್ನಾಳ್ ಮುನ್ಯಪ್ಪನವರು ಹೇಳೊಹಾಗೆ, " ಕರ್ ನಾಟ್ಕ", ಸರ್ಯಾಗಿದೆ. ನಮ್ಮವರೆಲ್ಲ ನಾಟ್ಕ ಮಾಡಕ್ ಸರಿಯಾಗಿದಾರೆ. ಹೇಳ್ಮಾಡ್ಸಿದ್ ತರ್ಹ. ಯಾಕಂತಿರೊ, ಇಲ್ಲಿರೊ ಅನಿರ್ದಿಷ್ಟತೆ ಎಲ್ಲು ಇಲ್ಲ. ಬಿಹಾರನು ವಾಸಿ ಅನ್ಸತ್ತೆ. ಇಲ್ಲಿ ಎಲ್ಲ ಇದೆ. ಸರ್ಕಾರನೆ ಇಲ್ಲ. ಎಂಥ ವಿಪರ್ಯಾಸ. ಮೂಲಭೂತ ಸೌಕರ್ಯಗಳ್ನ್ ಕೇಳೊದ್ ಯಾರ್ನ ?
ತಮಿಳ್ನಾಡ್ನೆ ನೋಡಿ. ಕಚ್ಚಾಡ್ತಾರೆ ನಿಜ. ಆದ್ರೆ. ಕೇಂದ್ರದಲ್ಲಿ ಭದ್ರವಾದ ಏರ್ಪಾಡ್ ಮಾಡ್ಕೊಂಡಿದಾರೆ. ಎಂತೆಧವ್ರು ಅಲ್ಲಿರೊದು. ಚಿದಂಬರಂ, ಮತ್ತಿತರು. ರಾಷ್ಟ್ರಪತಿ ಇದ್ರು. ಮುಖವಾದ ಹುದ್ದೆಗಳಲ್ಲಿ ಹಲವರು ಇದಾರೆ. ಮಣಿಶಂಕರ ಅಯ್ಯರ್. ಇತ್ಯಾದಿ.
ಮಹಾರಾಷ್ಟ ಉತ್ತುಂಗದಲ್ಲಿದೆ. ರಾಷ್ಟ್ರಾಧ್ಯಕ್ಷ್ಗರು, ಕೃಷಿಮಂತ್ರಿ, ಮತ್ತೆ ಶಿವರಾಜ್ ಪಾಟಿಲ್, ಮುಂತಾದವರು.
ಕೊಲ್ಕತ್ತ ಕೇಳ್ಲೆಬೇಡಿ. ಪ್ರಣಬ್ ಮುಖರ್ಜಿ, ಸ್ಪಿಕರ್, ಪ್ರಿಯರಂಜನ್ ದಾಸ್ ಮುನ್ಷಿ, ಒಬ್ರೆ ಇಬ್ರೆ. ಹಲವರು.
ಬಿಹಾರ ಕೂಡ ವಾಸಿ. [ಡಾ/ಪ್ರೊ.] ಲಾಲು ಪ್ರಸಾದ್ ಯಾದವ್, ಇದಾರೆ.
ಕರ್ನಾಟಕಮಾತ್ರ ಇನ್ನು ತಬ್ಬಲಿ. ಯಾರು ಇಲ್ಲ. ದ್ಯಾವೆಗೌಡ್ರನ್ನ ಬಿಟ್ರೆ. ಅವ್ರು ಪಾಪ, ಅವಾಗ ಇವಾಗ ಡಿಲ್ಲಿಗೊಗಿ, ಮತ್ ಬರ್ತಾರೆ. ಸದ್ಯಕ್ಕೆ ಹೇಳ್ಕೊಳಕ್ಕೆ ಅವ್ರೊಬ್ರೆ. ಮಾಜಿ ಪಂತ ಪ್ರಧಾನಿಗಳು, ಅಂತವ !
" ಕರ್ ನಾಟಕ್ " ದ ಹಣೆಬರ್ಹ, ಇನ್ನು ಎನೇನಿದ್ಯೊ. ದ್ಯಾ........ಬಲ್ಲ.
-ದೊಗ್ಗನಾಳ್ ಮುನ್ಯಪ್ಪನವರ ಕ್ಷಮೆಕೊರಿ.