ನಾವು ಏನಾಗಬೇಕಿತ್ತೊ ?

ನಾವು ಏನಾಗಬೇಕಿತ್ತೊ ?

ಕವನ

ನಾವು ಏನಾಗಬೇಕಿತತ್ತೊ ?

ಅದಾಗುವುದೇ ಇಲ್ಲ !

ಸರಿಯಾದ ಸಮಯಕ್ಕೆ

ಬಾಳರಥ ಹೋಗುತ್ತಿರಬೇಕಾದರೇ 

ಆಕಸ್ಮಿಕ ಮಳೆ ಬಂದು ಮನೆಯೊಳಗೆ

ಕೆಸರು ತುಂಬಿ ವಸ್ತುಗಳೆಲ್ಲ ನಾಶವಾದಂತೆ ಹೂತು ಬಿಡುತ್ತದೆ !

ಜೀವನ ಚಕ್ರ ಮುಂದೆ ಹೋಗದಂತೆ !!

 

ಸೋತು ಸುಣ್ಣವಾಗಿದ್ದ ಮನದಾಳದಲ್ಲಿ ಛಲಮೂಡಿ

ಮರೆಯಾಗುತ್ತದೆ 

ಇದಕ್ಕೆಲ್ಲ ಬಡತನವೇ ಪಾಠ

ಎದುರಾಳಿಯ ಸೊಕ್ಕು ಮುರಿಯ ಬೇಕೆಂದರೂ, 

ಸಿಗಲಾರದ ಹಿಂಬಲದಿಂದಾಗಿ ಕಣ್ಮಚ್ಚಿದ ದಿನಗಳಲ್ಲಿ

ಮತ್ತೆ ಹೊಸ ವಿಚಾರಗಳು ಮೂಡುವುದೇ ಇಲ್ಲ ! 

 

ಮೊನ್ನೆ ಯಾರೋ ಹೀಗಂದರು ನೀವು ನಿಮ್ಮ ಮೇರು

ವಿಚಾರಗಳಿಗೆ ಎಲ್ಲೋ ಇರಬೇಕಿತ್ತೆಂದು ? 

ಸತ್ಯ ಕಣ್ಣಿಗೆ ಕಾಣುವುದಿಲ್ಲ ಯಾರಿಗು ಯಾರಿಗೂ ! 

ಒಬ್ಬ ಯಾವುದರಲ್ಲೇ

ಆಗಲಿ ಸಾಧಿಸುತ್ತಾನೆಂದರೆ ? ಹೊಸತನವ ತರುತ್ತಿದ್ದಾನೆಂದರೆ ?

ಅವನ ; ಅವನ ವಿಚಾರಗಳ ತುಳಿದು 

ನಗುವ ಮಂದಿ ನಾವು ! 

 

ಈಗೀಗ ಕೆಸರುಗದ್ದೆಗಳಿಗೂ ನಮಗೂ ವ್ಯತ್ಯಾಸವೇ ಇಲ್ಲ !

ಅದಾದರೂ ಬೇಕು ಕೆಸರಿನಲ್ಲಿ ಕಮಲವರಳುತ್ತದೆ !

ಆದರೆ 

ನಮ್ಮಲ್ಲಿ ದ್ವೇಷ ಹುಟ್ಟಿಕೊಳ್ಳುತ್ತದೆ 

ಜೊತೆಗೆ ಸ್ವಲ್ಪ ಹೊಟ್ಟೆಕಿಚ್ಚು !

ಮೌನವಾಗಿರುವವರೆಗೂ ತಲೆಗೆ ಕುಟ್ಟಿ ಹಾಕುವವರೂ; 

ಹಾಕಿಸಿಕೊಳ್ಳುವವರೂ,

ಈ ಒಣ ಪ್ರತಿಷ್ಠೆಯ ಸಮಾಜದಲ್ಲಿ ಇದ್ದೇ ಇರುತ್ತಾರೆ !!

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್