ನಾವು ಮತ್ತು ಹಕ್ಕಿಗಳು!
ಕವನ
ರೆಕ್ಕೆಗಳೆರಡೇ ಹಕ್ಕಿಗೆ ಆಸ್ತಿ
ಉಳಿದದ್ದೆಲ್ಲ ನಾಸ್ತಿ-ನಾಸ್ತಿ!
ಹಕ್ಕಿಗೆ ಉಂಟೇ ಬ್ಯಾಂಕ್ ಬ್ಯಾಲೆನ್ಸು?
ಇಲ್ಲವೇ ಇಲ್ಲ ಪ್ರಮೋಶನ್ ಚಾನ್ಸು!
ಸೈಟು-ಫ್ಲ್ಯಾಟು ಯಾವುದು ಇಲ್ಲ,
ಆದರೂ ಹಕ್ಕಿಯ "ಬದುಕೇ" ಬೆಲ್ಲ!
ಗುರಿಯೋ ಬಾನಿನ ಎತ್ತರಕಿಹುದು,
ಮನುಜನಿಗಿಲ್ಲಿಯೆ ಉತ್ತರವಿಹುದು.
ಮಾನವಗೇನಿದ್ದರು ಖುಷಿ ಇಲ್ಲ
ಜಂಜಡ ತುಂಬಿದೆ ಜೀವನವೆಲ್ಲ!
ಮಾತು ಮಾತಿಗೂ ಕಿಡಿ, ತಕರಾರು,
ಕೋಪಕೆ ಕಾರಣ ಸಾವಿರದಾರು
ದೇವರು ಕೂಡ ನನ್ನಡಿಯಾಳು
ಎನ್ನುವ ಮೂರ್ಖಗೆ ಹಿಡಿಯುವರಾರು!!
ಸಿಟ್ಟು - ದ್ವೇಷ್ಜ - ಜಗಳ- ಕೇಡು
ಏಕೋ ನರನಿಗೆ ಹಮ್ಮಿನ ಕೋಡು
ಎದೆ - ಎದೆಗಳಲಿ ತುಂಬಿರೆ ಪ್ರೀತಿ,
ಇಳೆಗೇ ಸ್ವರ್ಗವು ಇಳಿವುದು ನೋಡು!
ಬನ್ನಿರಿ ನಾವೂ ಆಗುವ ಹಕ್ಕಿ
ಒಲವಿನ ಸೆಲೆಯೇ ಚಿಮ್ಮಲಿ ಉಕ್ಕಿ!!
~~~~~~~~~~~~~~~~~~~~~~~~~~~~~~~~~~
~~~~~~~~~~~~~~~~~~~~~~~~~~~~~~~~~~
Comments
ಉ: ನಾವು ಮತ್ತು ಹಕ್ಕಿಗಳು!
In reply to ಉ: ನಾವು ಮತ್ತು ಹಕ್ಕಿಗಳು! by ಭಾಗ್ವತ
ಉ: ನಾವು ಮತ್ತು ಹಕ್ಕಿಗಳು!