ನಾ ಕಚ್ಚುವೆ

ನಾ ಕಚ್ಚುವೆ

ಬರಹ

ಇವತ್ತು ಪುತ್ತೂರಿನ ರವೀಂದ್ರ ಐತಾಳರ ಮನೆಗೆ ಹೋಗಿ ಬಂದೆವು. ಭೇಟಿ ಕೊಟ್ಟ ನಮಗೆ, ಜನರಲ್ಲಿ ಹಾವಿನ ಭಯ ಕಡಿಮೆ ಮಾಡಲು ಅವರು ಬಹಳ ಒಳ್ಳೆಯ ಕೆಲಸ ಮಾಡಿದ್ದಾರೆ ಅನಿಸಿತು: ಕೆಲ ಹಾವು ತಳಿಗಳ ಎರಡೆರಡು ಹಾವುಗಳನ್ನು ಸಾಕಿ ಬೆಳೆಸಿದ್ದಾರೆ. ಅದರಲ್ಲಿ ಹೊಸ ಸೇರ್ಪಡೆ ಈ ಪುಟ್ಟ ಮರಿ ಹಾವುಗಳು. ಯಾರೋ ಕಂಡ ಕೂಡಲೆ ಸಾಯಿಸದೆ ಹಿಡಿದು ತಂದುಕೊಟ್ಟದ್ದಂತೆ ಇದು, ನಾಳೆಯ ದಿನ ಕಾಡಿಗೆ ಬಿಡುವುದು ಎಂದಿದ್ದದ್ದು ಇವತ್ತು ಈ ಮಡಿಕೆಯಲ್ಲಿ ಇಟ್ಟಿದ್ದರು.

ಮಡಿಕೆ ತೆಗೆದು ನಮಗೆ ತೋರಿಸುವಾಗ ಆ ಹಾವಿನ ಮರಿಗೆ ಐತಾಳರು ಮಾಡುತ್ತಿರುವ ಕೆಲಸದ ಅರಿವು ಬಹಳ ಕಡಿಮೆ ಇದ್ದೀತು. ಇವನ್ನು ವಾಪಸ್ ಕಾಡಿಗೆ ಬಿಡುತ್ತಿರುವ ಐತಾಳರಿಗೆ ಮೇಲಿರುವ ಚಿತ್ರದಲ್ಲಿ ಕಚ್ಚಿದಂತೆ ಕಚ್ಚುವುದಿರಲಿ,  ಅದರ ಜೀವ ಉಳಿಸಿದವರಿಗೂ ಹೀಗೇ ಕಚ್ಚಬಹುದು ಕೂಡ. ಅದೇ ಅಲ್ಲವ ಪ್ರಕೃತಿ? :-)

ಐತಾಳರು ಹಾವು ಕಚ್ಚಿದವರಿಗೆ ಔಷಧ ಕೊಡುತ್ತ ಜೀವನ ಕಂಡುಕೊಂಡಿದ್ದಾರೆ. ಆದರೆ ಇವರು ಸಾಕಿರುವ ಹಾವುಗಳು ಜನರ ಭಯ, ಮನಸ್ಥಿತಿ ಬದಲಾಯಿಸುವಷ್ಟು. ಒಳ ಹೊಕ್ಕ ಕೂಡಲೆ ಎದುರಿಗೊಂದು ಕಾಳಿಂಗ ಸರ್ಪ. ನನಗೆ ಯಾವುದರಿಂದ ದೂರ ಓಡುತ್ತೇನೆಯೋ ಅದಕ್ಕೇ ಕಟ್ಟಿ ಹಾಕಿದಂತಾಯಿತು, ಆ ಕ್ಷಣ. ಆದರೆ ಸ್ವಲ್ಪ ಹೊತ್ತಿನಲ್ಲೇ ಹಾವುಗಳ ಭಯ ಕಡಿಮೆಯಾದದ್ದಲ್ಲದೆ ಸುಮಾರು ವಿಷಯಗಳು ಹಾವುಗಳ ಬಗ್ಗೆ ತಿಳಿದುಕೊಳ್ಳುವ ಅವಕಾಶ ಸಿಕ್ಕಿತು. ಹಾವುಗಳಷ್ಟೇ ಅಲ್ಲದೆ ಹಾವು ಕಚ್ಚಿದವರಿಗೆ ಔಷಧ ಕುರಿತು ರವೀಂದ್ರನಾಥರಿಟ್ಟಿರುವ ಆಸಕ್ತಿ ಅಮೂಲ್ಯವಾದದ್ದು ಎಂದು ನಮಗೆ ಅನಿಸಿತು.