ನಾ ಬರೆದ ಮೊದಲ ಪ್ರೇಮ ಪತ್ರ

ನಾ ಬರೆದ ಮೊದಲ ಪ್ರೇಮ ಪತ್ರ

ಕವನ

ನಾ ಬರೆದ ಮೊದಲ ಪ್ರೇಮ ಪತ್ರ

ಭಾವನೆಗಳಿಗೆ ಅಕ್ಷರ ರೂಪ ನೀಡಿ ಬರೆದ ಪತ್ರ..

ಒಲವೆಂಬ ಲೇಖನಿಯಲಿ ಪ್ರೇಮದ ಶಾಯಿಯ ತುಂಬಿ

ಹೃದಯವೆಂಬ ಹಾಳೆಯಲಿ ಬರೆದೆ ಈ ಪತ್ರವ...

ನಿನಗಿದು ಕೇವಲ ಅಕ್ಷರ ತುಂಬಿದ ಹಾಳೆಯಿರಬಹುದು

ಆದರೆ ಇದು ನನ್ನ ಮನದಾಳದಲ್ಲಿ ಹುದುಗಿದ್ದ ಪ್ರೀತಿಯನ್ನೆಲ್ಲ..

ಧಾರೆಯೆರೆದು ಬರೆದಿರುವ ಪ್ರೇಮ ಪತ್ರ...

ಒಲ್ಲೆ ಎನಬೇಡ ಗೆಳತಿ ಈ ಓಲೆಯ ಓದಿದ ಮೇಲೆ

ಉತ್ತರಿಸದೆ ಸುಮ್ಮನಿದ್ದರೂ ಪರವಾಗಿಲ್ಲ...

ಇಲ್ಲವೆಂದು ನೋಯಿಸಬೇಡ ನನ್ನೀ ಮನವ