ನಿಟ್ಟೆಯಲ್ಲಿ ಗ್ನು/ಲಿನಕ್ಸ್ ಹಬ್ಬ - ೩

ನಿಟ್ಟೆಯಲ್ಲಿ ಗ್ನು/ಲಿನಕ್ಸ್ ಹಬ್ಬ - ೩

ಬರಹ

ಕನ್ನಡಿಗರಿಗೆ ಗ್ನು/ಲಿನಕ್ಸ್ ಹತ್ತಿರ ಆಗಬೇಕು, ಅವರು ಸ್ವತಂತ್ರ ತಂತ್ರಾಂಶಗಳನ್ನ ಬಳಸೋದು ಕಲೀಬೇಕು, ತಂತ್ರಾಂಶ ಸ್ವಾವಲಂಬನೆಯನ್ನ ಹೇಗೆ ಸಾಧ್ಯವಾಗಿಸ್ಕೋಬೇಕು ಅಂತ ತಿಳೀಬೇಕು, ಪೈರಸಿಗೆ ಮೊರೆ ಹೋಗದೆ ಇತರರಿಗೂ ಗ್ನು/ಲಿನಕ್ಸ್ ಸ್ವಾತಂತ್ರ್ಯದ ಕಂಪನ್ನು ಹರಿಸಲಿಕ್ಕೆ  ಎಲ್ಲರೂ ಕೈಜೋಡಿಸ್ಬೇಕು. ಈ ಉದ್ದೇಶಗಳನ್ನ ಇಟ್ಟುಕೊಂಡು ಶುರುವಾದ ಗ್ನು/ಲಿನಕ್ಸ್ ಹಬ್ಬ ಮತ್ತೆ ನಿಮ್ಮನ್ನೆಲ್ಲ ಮತ್ತೊಂದು ತಂತ್ರಜ್ಞಾನ ಔತಣಕೂಟಕ್ಕೆ  ಆಹ್ವಾನಿಸ್ತಿದೆ. ಈ ಬಾರಿ ಮಂಗಳೂರಿನಿಂದ ೬೦ ಕಿ.ಮೀ ದೂರದ ನಿಟ್ಟೆಯಲ್ಲಿ  ನಮ್ಮೆಲ್ಲರ ಭೇಟಿ.

ಬೆಂಗಳೂರು, ಮೈಸೂರು ಈ ಎರಡು ನಗರಗಳಲ್ಲಿ ನೆಡೆದ ಗ್ನು/ಲಿನಕ್ಸ್ ಹಬ್ಬದಲ್ಲಿ ನೀವು ತೋರಿದಉತ್ಸಾಹ, ನಮಗೆ ಸ್ಪೂರ್ತಿಯಾಗಿದ್ದು, ಪಶ್ಚಿಮ ಘಟ್ಟಗಳು, ದೇವಸ್ಥಾನಗಳು, ಕಾರ್ಕಳದ ಗೊಮ್ಮಟೇಶ್ವರ, ಕರಾವಳಿಯ ಕಡಲತೀರ, ಬಂದರು, ಕೈಗಾರಿಕೆಗಳಿಂದ ಕರ್ನಾಟಕದ ಸಮೃದ್ದಿಯನ್ನ ಪ್ರತಿಬಿಂಬಿಸುವ ಈ ಭಾಗಕ್ಕೆ  NMAM Inst of Tech, ನಿಟ್ಟೆ ರವರು ನಮ್ಮನ್ನೆಲ್ಲ ಆಹ್ವಾನಿಸಿದ್ದಾರೆ. ಐ.ಟಿ ಯಲ್ಲೂ ಈ ಪ್ರದೇಶ ಹಿಂದೇನೂ ಉಳಿದಿಲ್ಲ. ಇನ್ಪೋಸಿಸ್ ಆಗಲೇ ಇಲ್ಲಿ ತನ್ನ ಶಾಖೆಯನ್ನ ಹೊಂದಿದೆ. ಈ ಬಾರಿಯ ಗ್ನು/ಲಿನಕ್ಸ್ ಹಬ್ಬ ನೆಡೆಸಲು ನಮ್ಮೊಡನೆ ಕೈ ಜೋಡಿಸಿರುವ  ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ
ಮಹಾವಿದ್ಯಾಲಯ(ನಿಟ್ಟೆ) ಈಗಾಗಲೇ ಅನೇಕ ಅಂತರ್ ರಾಷ್ರ್ಟೀಯ ಸಮ್ಮೇಳನಗಳನ್ನ ಆಯೋಜಿಸಿಕೊಂಡು ಬಂದಿದೆ.

ಫೆಬ್ರವರಿ ೭ಶನಿವಾರ,  ನಿಟ್ಟೆಯಲ್ಲಿ ISE ವಿಭಾಗದವರು ಈ ಕಾರ್ಯಕ್ರಮವನ್ನು ನೆಡೆಸುವ ಹೊಣೆಯನ್ನ ಸಂಪದ ತಂಡದೊಂದಿಗೆ ಹಂಚಿಕೊಂಡಿದ್ದಾರೆ.  ಗ್ನು/ಲಿನಕ್ಸ್ ಬಗ್ಗೆ ತಿಳಿದವರು, ತಿಳಿಯದವರು, ಇದರ ಬಗ್ಗೆ ಹೆಚ್ಚಿನದನ್ನ ಕಲಿಯಲಿಕ್ಕೆ  ಆಸಕ್ತಿಯಿರುವವರು ನಮ್ಮೊಡನೆ ಮತ್ತೆ ಬೆರೆಯುತ್ತೀರಲ್ವಾ?

ವಿ.ಸೂ: (ಕಾರ್ಯಕ್ರಮಕ್ಕೆ ನೊಂದಾವಣೆಯನ್ನ ಸಂಪದದಲ್ಲಿ ಮತ್ತು habba.in ನಲ್ಲಿ ಅನುವು ಮಾಡಿಕೊಡಲಾಗುತ್ತದೆ ).

ಗ್ನು/ಲಿನಕ್ಸ್ ಹಬ್ಬದಲ್ಲಿ ನೀವು ಕಾಣಬೇಕೆನಿಸಿದ ವಿಷಯಗಳನ್ನ ನಮ್ಮೊಂದಿಗೆ ಚರ್ಚಿಸಿ. ಈ ಲೇಖನಕ್ಕೆ  ಕಾಮೆಂಟುಗಳ ರೂಪದಲ್ಲೋ, irc.freenode.net#kannada ಚಾನಲ್ ನಲ್ಲೋ ನೀವು ಸಂದೇಶಗಳನ್ನು ನಮಗೆ ಕಳಿಸಬಹುದು. http://habba.in ನಲ್ಲೂ ನೀವು ನಾವು ಮಾಡಿಕೊಳ್ಳುತ್ತಿರುವ ತಯಾರಿಯ ಬಗ್ಗೆ  ಓದಬಹುದು.

ಸಂಪದದ ಈ ಕಾರ್ಯಕ್ರಮದಲ್ಲಿ  ಕೈಜೋಡಿಸಲು ಇಚ್ಚಿಸುವವರು, ಕೆಳಗಿನ ಕೊಂಡಿಯಲ್ಲಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳ ಬಹುದು ಹಾಗು <tech-volunteers@sampada..net> ಕ್ಕೊಂದು ಸಂದೇಶ ಕಳಿಸಿದರೆ ನಿಮ್ಮೊಂದಿಗೆ ಸಂಪರ್ಕವಿಟ್ಟು ಕೊಳ್ಳಲು ಸಹಾಯವಾಗುತ್ತದೆ.

ವಿಕಿ: http://dev.sampada.net/GNU_Linux_Habba_v3.0

ಹಬ್ಬದ ವೆಬ್ ಸೈಟ್ ಮತ್ತು ಬ್ಲಾಗ್: http://habba.in

ಟ್ವಿಟರ್: http://twitter.com/techsampada

ಈ-ಮೈಲ್ ವಿಳಾಸ: tech-volunteers@sampada..net

ಕಾರ್ಯಕ್ರಮ ನೆಡೆಯುವ ಸ್ಥಳ:
ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯ(NMAMIT,Nitte)

ದಿನಾಂಕ:

ಫೆಬ್ರವರಿ, ೦೭, ೨೦೦೯