ನಿನದೇ ನೆನಪು.. ಕವಿತೆ ಒಂದು, ಮುಕ್ತಾಯ ಎರಡು
ಕವನ
ನೆನಪ ನೆಪದಲ್ಲಿ
ನನ್ನ ಮನಸಲ್ಲಿ
ಕಣ್ಣ ಕನಸಲ್ಲಿ
ಬಿಸಿಯ ಉಸಿರಲ್ಲೂ
ನೀನೇನಾ ?|1|
ನೆಪವು ಹಟವಾಗಿ
ಬಿಡದ ಚಟ(ತಪ)ವಾಗಿ
ಮನದ ಹಟಯೋಗಿ
ಸುಖವ ಮರೆಯಲು
ಬೀಸಿದ ಮಾಯೆ ನೀನೇನಾ?|2|
ಮುಕ್ತಾಯ-೧
ತಿಂಗಳಿನ್ನೊಂದು,
ನೀ ಮರೆಯಾಗುವೆ
ನಂಬಿದ ಯುವಕರ
ಬಾಯಿ ತೊರೆವೆ, ಗುಟ್ಕಾ
ಮುಕ್ತಾಯ-೨
ಇಡೀ ತಿಂಗಳಲಿ
ಓದಿದ, ಮರೆತುದ
ಸಾಣೆಗೆ ಹಚ್ಚೋ ವಾರ್ನಿ೦ಗ್ ಬೆಲ್
ಮತ್ತೆ ಬಂದೆಯಾ ಇಂಟರ್ನಲ್..