ನಿನ್ನದೇ ಜೀವನ By mbpatil369 on Fri, 04/03/2015 - 02:52 ಕವನ ನೀ ನಿನ್ನವನಾಗಿಯೇ ಇರು ದೊರೆ ಬೇಡ ಬೇರೆಯವರ ಅನುಕರಣೆ ಸುಗಮವಾಗೇನು ಇರದು ನಿನ್ನ ದಾರಿ ಗಮ್ಯ ಮರೆತು, ಸುಖಿಸು ಪಯಣ ಮರಿ ಬೇಕಿಲ್ಲ ಪರರ ಅನುಮೋದನೆ ಅರಿಯರು ನೀ ಪಡುವ ವೇದನೆ ಇರುವುದು ಒಂದೇ ಒಂದು ಜೀವನ ಮರೆಯದೆ ಜೀವೀಸು ನಿನ್ನದೇ ಜೀವನ Log in or register to post comments