ನಿನ್ನ ಪಾಡೇನೆ ದೀಪ..?

ನಿನ್ನ ಪಾಡೇನೆ ದೀಪ..?

ಕವನ

 ಎತ್ತೆತ್ತಲು ಕಾರ್ಗತ್ತಲು

ನೆರಲಿಲ್ಲದ ಅಲೆಮಾರಿ..

ಬಂಡಾಯದ, ಚೀತ್ಕಾರದ

ಹುಸಿ ನಗೆಯ ರುವಾರಿ..

 

ಆಕಾರದ ಈಕಾರದ

ಸಾಕಾರದ ಕುಸುರಿ..

ಮತ್ತೆಂದಿಗೆ, ಹೊಸದೊಂದಿಗೆ

ನಿನ್ನಾ ತಯಾರಿ..

 

ಬರಿ ಮಾತಿದೆ, ಒಳ ಪೊಲ್ಲಿದೆ

ಮತ್ತೊಂದರ ಶಂಕೆ..

ಬಂದಾರೆ ಬಂದು ಬಿಡು

ಬೇಕೆಲ್ಲದಕು ಅಂಕೆ..

 

ಬೀದಿ ಬೆಳಕಿಗೂ ಉಂಟು

ಮಳೆ ಹುಳುಗಳ ಮುತ್ತು..

ನಿನ್ನ ಪಾಡೇನೆ ದೀಪ

ಯಾರು ಸೋಕದ ಹೊತ್ತು..

 

ಕತ್ತಾಲಾದರೆ ಮತ್ತೆ ಬೆಳಗು

ಪಾಲುಗುಡಿ, ಬರಿ ಮೌನದ ಸವಾರಿ..

 

ಎತ್ತೆತ್ತಲು ಕಾರ್ಗತ್ತಲು

ನೆರಲಿಲ್ಲದ ಅಲೆಮಾರಿ..

 

ಶಿವಪ್ರಸಾದ್ ಎಸ್.ಪಿ.ಎಸ್

Comments