ನಿಮಗೆಲ್ಲಾ ನಂದನ ಸಂವತ್ಸರದ ಯುಗಾದಿಯ ಹಾರ್ದಿಕ ಶುಭಾಶಯಗಳು !

ನಿಮಗೆಲ್ಲಾ ನಂದನ ಸಂವತ್ಸರದ ಯುಗಾದಿಯ ಹಾರ್ದಿಕ ಶುಭಾಶಯಗಳು !

ವರಕವಿ ಬೇಂದ್ರೆಯವರು ಯುಗಾದಿಯ ಸುದಿನದಂದು ಖಂಡಿತ ನೆನೆಪಿಗೆ ಬರುತ್ತಾರೆ.

ಯುಗ ಯುಗಗಳು ಕಳೆದರೂ,

ಯುಗಾದಿ ಮರಳಿ ಬರುತಿದೆ 

ಹೊಸವರುಷವು ಹೊಸ ಹರುಷವ 

ಎಲ್ಲೆಲ್ಲಿಯೂ ತರುತಿದೆ....

ಈ ನಂದನ ಸಂವತ್ಸರದ ಯುಗಾದಿಯ ಹಬ್ಬ ನಮ್ಮೆಲ್ಲರ ಜೀವನದಲ್ಲಿ ಹೊಸ ಹುರುಪು ಸಂತಸ ಮತ್ತು ಒಳ್ಳೆ ಕೆಡಕುಗಳ ಬಗ್ಗೆ ಸ್ಪಷ್ಟ ಕಲ್ಪನೆಗಳನ್ನು ಸಮರ್ಥವಾಗಿ ನಿರ್ಧರಿಸಿ ಮುಂದುವರೆಯುವ ಒಳ್ಳೆಯ ಮನಸ್ಸನ್ನು ದಯಪಾಲಿಸಲೆಂದು ಭಗವಂತನನ್ನು ಬೇಡುತ್ತೇನೆ. ವಿಶೇಷವಾಗಿ ಕರ್ನಾಟಕದ ಜನತೆಗೆ ಇದು ಅತ್ಯಾವಶ್ಯಕ. 

ಕೇವಲ ನಮ್ಮ ಮನುಷ್ಯ ಮುಖ್ಯಮಂತ್ರಿಯಾಗಲಿ ಎನ್ನುವ ಜೊಳ್ಳು ತತ್ವಕ್ಕೆ ಬಲಿಯಾಗದೆ ಸಮಗ್ರ ರಾಜ್ಯದ ಒಳಿತನ್ನು ಕಾಣುವ ಸುಬುದ್ಧಿ ಬರಲಿ. ದೇವೇ ಗುಡರು ಆಳಿದರು, ಮುಂದೆ ಯಡಿಯೂರಪ್ಪನವರು; ಈಗ ಸದಾನಂದಗುಡರು. ಅವರಿಗೆಲ್ಲಾ ನಾವು ಒಂದು ಟರ್ಮ್ ಸಮಯ ಒದಗಿಸೋಣ. ಸರಿಯಾಗಿ ನಿರ್ವಹಣೆ ಮಾಡದಿದ್ದರೆ ಕಿತ್ತೊಗೆಯಲು ನಮ್ಮಲ್ಲಿ ಚುನಾವಣೆಯ ಅಸ್ತ್ರವಿದೆ. ಮಧ್ಯದಲ್ಲೇ ಯಾರನ್ನು ಡಿಸ್ಟರ್ಬ್ ಮಾಡುವ ದುರ್ಬುದ್ಧಿ ಬೇಡ. ಬಿ.ಜೆ.ಪಿ. ಬಹುಶಃ ಕರ್ನಾಟಕಕ್ಕೇ ಒಂದು ಕೆಟ್ಟ ಕನಸಾದಂತಿದೆ. ಬೇರೆ ಪಕ್ಷಗಳು ಅಷ್ಟೇ.

ಈಗ ನಾವು ಕಾಂಗ್ರೆಸ್ ಮೊರೆ ಹೋಗಬೇಕೆ ಎನ್ನುವುದು ಮುಂದಿನ ಚುನಾವಣೆಯಲ್ಲಿ ನಾವು ತೆಗೆದುಕೊಳ್ಳುವ ನಿರ್ಧಾರವಾಗುತ್ತದೆ !

ಒಟ್ಟಿನಲ್ಲಿ ಮಲಗಿ ಗೊರಕೆಹೊಡೆದು ನಿದ್ರಿಸುತ್ತಿರುವ ಕರ್ನಾಟಕ ಸ್ವಲ್ಪ ಎದ್ದು ಕಣ್ಣುಜ್ಜಿಕೊಂಡು ಪಕ್ಕದ ರಾಜ್ಯಗಳತ್ತ ನೋಟ ಹರಿಸಬೇಕಾಗಿದೆ. ಅವರೆಲ್ಲಾ ಕೇಂದ್ರದಲ್ಲಿ ತಮ್ಮ ಅಸ್ತಿತ್ವವನ್ನು ಹೇಗೆ ಇಟ್ಟುಕೊಂಡು ತಮ್ಮ ರಾಜ್ಯದ ಬೆಳವಣಿಗೆಗೆ ಶ್ರಮಿಸುತ್ತಿದ್ದಾರೆ ಎನ್ನುವುದನ್ನು ಬಿಟ್ಟು, ಇನ್ನೆರಡು ತಿಂಗಳು ಮತ್ತೆ ನಾನೇ ಮುಖ್ಯಮಂತ್ರಿಯಾಗ ಬೇಕು ಎನ್ನುವ ಹುಂಬತನ ಎಷ್ಟರಮಟ್ಟಿಗೆ ಸರಿ ! ? ಎಲ್ಲೋ ಒಂದು ರಾಜ್ಯದಲ್ಲಿ ಬಿ.ಜೆ.ಪಿ.ಸರಕಾರ ಸ್ಥಾಪಿಸುವ ಪರಿಣಾಮ ಏನಾಗುತ್ತಿದೆ ಎನ್ನುವುದನ್ನು ನಾವು ಕಂಡಿದೀವೆ. ಈ ತತ್ವಕ್ಕೆ ಹೊರತೆಮ್ದರೆ ಗುಜರಾತಿನ ನರೇಂದ್ರ ಮೋದಿಯವರ ಸಮರ್ಥ ಸರಕಾರ ಅಷ್ಟೇ....

ಒಟ್ಟಿನಲ್ಲಿ  ಬರಿ ಹಬ್ಬದ ದಿನ ಶುಭ ಸಂದೇಶ ಕೊರುವುದರ ಜೊತೆಗೆ ನಾನು ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳುವುದು ಅನಿವಾರ್ರ್ಯವಾಗಿದೆ.

ಕರ್ನಾಟಕದಂತಹ ಒಂದು ಪ್ರಗತಿಪರ ರಾಜ್ಯ ಅಲ್ಲೋಲಕಲ್ಲೋಲವಾಗಿ ಸಮಸ್ಯೆಗಳ,  ಅನಿಷ್ಟವಿಚಾರಗಳ, ಹಾಗು ಅರಾಜಕತೆಯ ಬಿಡಾಗಿರುವುದನ್ನು ನಾವುಗಳು ಕೊನೆಗೊಳ್ಳಿಸುವ ಸಂಕಲ್ಪ ಇಂದು ಮಾಡೋಣ !

ಈ ನಮ್ಮ ಹೊಸವರ್ಷ ಯುಗಾದಿಯಂದು !

 

 

 

ಒಟ್ಟಿನಲ್ಲಿ