ನೀತಿಕತೆ
ಒಂದು ನೀತಿಕತೆ
ರೈತನೊಬ್ಬ ಬೇಕರಿಗೆ ಪ್ರತಿದಿನ ಒಂದು ಪೌಂಡ್ ಬೆಣ್ಣೆ ಮಾರಾಟ ಮಾಡುತ್ತಿರುತ್ತಾನೆ.ಒಮ್ಮೆ ಬೇಕರಿಯವನಿಗೆ ಬೆಣ್ಣೆಯ ತೂಕದ ಬಗ್ಗೆ ಸಂದೇಹ ಬರುತ್ತದೆ.ತೂಕಕ್ಕೆ ಹಾಕಿದಾಗ ಕಡಿಮೆ ಇದ್ದದ್ದು ಗೊತ್ತಾಗುತ್ತದೆ.ಕೋಪಗೊಂಡ ಬೇಕರಿಯವ ರೈತನ ವಿರುದ್ಧ ದಾವೆ ಹೂಡುತ್ತಾನೆ.ನ್ಯಾಯಧೀಶರು ರೈತನಲ್ಲಿ,'ನೀನು ಬೆಣ್ಣೆ ಅಳೆಯಲು ಯಾವುದಾದರೂ ಮಾಪನ ಬಳಸುತ್ತೀಯಾ'ಎಂದು ಕೇಳಿದರು.ರೈತ,'ಸ್ವಾಮಿ, ನಾನೊಬ್ಬ ಸಣ್ಣ ರೈತ.ನನ್ನ ಬಳಿ ಸರಿಯಾದ ಅಳತೆ ಇಲ್ಲ.ಆದರೂ ನನ್ನದೇ ಆದ ಅಳೆಯುವ ರೀತಿ ಇದೆ' ಎನ್ನುತ್ತಾನೆ.ಆಗ ನ್ಯಾಯಧೀಶರು,'ಯಾವ ರೀತಿ ಅಳತೆ ಮಾಡ್ತೀಯಾ ಅಂತ' ಕೇಳ್ತಾರೆ.ಅದಕ್ಕೆ ರೈತ,'ಸ್ವಾಮಿ, ಬೇಕರಿಯವನು ನನ್ನ ಬಳಿ ಒಂದು ಪೌಂಡ್ ಬೆಣ್ಣೆ ಕೊಳ್ಳುವ ಮುಂಚೆಯೇ ನಾನು ಅವನ ಬಳಿ ಬ್ರೆಡ್ ಕೊಳ್ಳುತ್ತಿದ್ದೆ.ಪ್ರತಿದಿನ ಅವರು ಒಂದು ಪೌಂಡ್ ಬ್ರೆಡ್ ತಂದುಕೊಟ್ಟಾಗ ಅದನ್ನು ನಾನು ತಕ್ಕಡಿಯಲ್ಲಿಟ್ಟು ಅದಕ್ಕೆ ಸಮತೂಕದ ಬೆಣ್ಣೆ ಕೊಡುತ್ತಿದ್ದೆ.ತಪ್ಪು ತೂಕಕ್ಕೆ ಯಾರಾದರೂ ಜವಾಬ್ದಾರರಾಗಿದ್ದರೆ ಅದು ಬೇಕರಿಯವನೇ'ಎನ್ನುತ್ತಾನೆ.
ನೀತಿ:-ನಾವು ಇತರರಿಗೆ ಏನು ಕೊಡುತ್ತೇವೆಯೋ ಅದನ್ನೇ ನಾವೂ ಪಡೆಯುತ್ತೇವೆ.
-@ಯೆಸ್ಕೆ
Comments
ಉ: ನೀತಿಕತೆ
ಸೊಗಸಾದ ನೀತಿ!!