ನೀನುಳಿದೆ ಬದಲದೇ...
ಕವನ
ಕಪ್ಪು ಬಿಳುಪಿನ ಕಾಲ ಸಂದಿದೆ
ಈಗ ಬಣ್ಣದ ಜಗವಿದು
ನೀನು ಏತಕೆ ರೂಪ ಬದಲದೆ
ಹಿಂದಿನಂತೆಯೆ ಉಳಿದುದು
ಹೊಸತು ಕಂಡರೆ ಹಳತು ಮೂಲೆಗೆ
ಸರಿಸಿ ಬಿಡುವರು ಈ ಜನ
ಸೊಗಸಿನೆಲ್ಲವು ತನ್ನದೆನ್ನುತ
ಬಳಸಿ ಎಸೆಯುವ ದುರ್ಗುಣ
ನಿನ್ನ ಸ್ವಂತಿಕೆ ಉಳಿಸಿಕೊಂಡಿಹೆ
ಅದುವೆ ಶ್ರೇಷ್ಠವು ಎನಿಸಿತೆ
ಮನುಜನಂತೆಯೆ ಬಣ್ಣ ಬದಲಿಪ
ಗೀಳು ಬಾರದೆ ಹೋಯಿತೆ?
ಸುತ್ತ ಹಸಿರಿನ ಸಸ್ಯ ತುಂಬಿದೆ
ಹೂವನರಸುತ ಬಂದೆಯಾ
ದಣಿವನಾರಿಸೆ ಕೊಂಚ ಸಮಯಕೆ
ಪಡೆದ ಎಲೆಗಳ ಆಶ್ರಯಾ||
-ಪೆರ್ಮುಖ ಸುಬ್ರಹ್ಮಣ್ಯ ಭಟ್
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್