ನೀನು ಶ್ರೇಷ್ಠ ..
ಕವನ
ನನ್ನ ಕನಸಿನ ಮನಸ್ಸಿನ ಗೆಳೆಯ ನೀನು
ನೀನಿಲ್ಲದೆ ಬದುಕಲಾರೆನು ನಾನು ..
ಮುಗ್ಧ ಮನಸ್ಸಿನ ಹೃದಯ ನಿನ್ನದು
ಕಾಡಿಸಿ ಪ್ರೀತಿಸುವ ಮನಸ್ಸು ನನ್ನದು ..
ಜೋಕೆಯಾಗಿ ನಗಿಸುವ ಮಾತು ನಿನ್ನದು
ನಗುವಲ್ಲಿ ಅಳಿಸುವ ವಾಕ್ಯ ನನ್ನದು..
ನನಗಾಗಿ ಉಸಿರಾಡುವ ಉಸಿರು ನಿನ್ನದು
ನಿನ್ನುಸಿರೆ ನನ್ನುಸಿರು ಎನ್ನುವ ಜೀವ ನನ್ನದು..
ಮುದ್ದು ಮಾಡಿ ಹೇಳುವ ಸ್ವಭಾವ ನಿನ್ನದು
ಸಿಟ್ಟಿನಿಂದ ತಿಳಿಸುವ ಹಟ ನನ್ನದು ..
ಸುಖವನ್ನೇ ಬಯಸಿರುವ ಮನಸ್ಸು ನಿನ್ನದು
ದು:ಖವನ್ನೇ ನೀಡಿರುವ ಕೆಟ್ಟ ಮನಸ್ಸು ನನ್ನದು ..
ಕ್ಷಮಿಸುವ ದೊಡ್ಡ ಹೃದಯ ನಿನ್ನದು
ತಪ್ಪನ್ನೇ ಮಾಡುವ ಚಿಕ್ಕ ಹೃದಯ ನನ್ನದು..