"ನೀನೂ ಒಮ್ಮೆ ಅನುಭವಿಸಿಬಿಡು!"
ಓ ಗೆಳತಿ,
ನಿನ್ನ ನೆನಪಿನಲೆ ನೆನೆ ನೆನೆದು
ಮೊಳೆಕೆಯೊಡೆಯುವ ಸಮಯ
ಈ ಪ್ರೀತಿ;
ಒಮ್ಮೆ ಬಂದಾದರೂ ನೋಡ ಬೇಡವೆ?
ಯಾಕೆ ?, ನಿನಗಿಲ್ಲವೇ ಇದಾವುದರ ಗೊಡವೆ?
ಇದ್ದರೂ, ಒಳಗೆ ಅದುಮಿಟ್ಟುಕೊಂಡು
ಸುಕಾ ಸುಮ್ಮನೆ ನಿನ್ನನೆ ನೀನು ಏಕೆ ಸುಡುವೆ!
ಒಮ್ಮೆ ಬಂದು ನೋಡಿ ಬಿಡು
ಮೊಳೆಕೆಗೂ ಮರವಾಗೋ ಬಯಕೆ ಇದೆ !!
ಓ ಗೆಳತಿ,
ನಿನ್ನ ನೆನಪಿನಲೆ ನೆನೆ ನೆನೆದು
ಕಣ್ಗಳೆಲ್ಲಾ ಒದ್ದೆಯಾಗಿ
ಸದ್ದಿಲ್ಲದೆ ಸಾವಿರ ಭಾಷೆಗಳನಾಡುತಿವೆ,
ಅದರಲ್ಲಿ ನಿನಗೊಂದೂ ಅರ್ಥವಾಗದೆ?
ಅರ್ಥವಾದರೂ ಅದನ್ನು ನನ್ನಂತೆ ವ್ಯಕ್ತಪಡಿಸಲಾಗದೆ?
ಇಲ್ಲದಿರೆ ಹೇಳು ನಿನದಾವುದಾ ಭಾಷೆ
ಅದನ್ನೇ ಕಲಿತು,
ನಿನ್ನೊಡನೆ ಮಾತನಾಡುವೆ
ಏಕೆಂದರೆ, ನನಗಿನ್ನೂ ಬಹುಭಾಷಿಯಾಗಬೇಕೆಂಬ ಹೆಬ್ಬಯಕೆ ಇದೆ!!
ಓ ಗೆಳತಿ,
ಒಂದಿಲ್ಲದೊಂದು ದಿನ
ನಿನಗೂ ಬರುವುದು ನನ್ನ ಸರತಿ
ಆಗ ವೇದ್ಯವಾಗುವುದು ನಿನಗೆ
ನಾ ಭೇದಿಸಿದ ಚಕ್ರವ್ಯೂಹ !
ಅಲ್ಲೆಲ್ಲ ಬರೀ ಭಾವಾಂತರಂಗಗಳದೆ ಕಲಹ.
ಇದು ಯಾವ ರಣರಂಗಕ್ಕೆನೂ ಕಡೆಯಲ್ಲ,
ಏಕೆಂದರೆ,
ನಿನ್ನನ್ನೇ ನೀನು ಜಯಿಸುವುದು ಗೆದ್ದ ಸಾಮ್ರಾಜ್ಯಕ್ಕಿಂತಲೂ ಮಿಗಿಲು.
ಗೆದ್ದು ಹೊರಬಂದಾಗಿನ ಆ ಸಂತೃಪ್ತ ಭಾವ
ನಾ ಹೇಳಿದರೆ ಅರ್ಥವಾಗುವುದಿಲ್ಲ.
ಅದನ್ನೇ "ನೀನೂ ಒಮ್ಮೆ ಅನುಭವಿಸಿಬಿಡು" !!
ಯಾಕೆಂದರೆ..ನನಗೂ
' ನೀನು ಬಾಳನ್ನು ಪೂರ್ಣ ಆಶ್ವಾದಿಸಬೇಕೆಂಬ '
ಉತ್ಕಟ ಇಚ್ಚೆ ಇದೆ.
Comments
ಉ: "ನೀನೂ ಒಮ್ಮೆ ಅನುಭವಿಸಿಬಿಡು!"
In reply to ಉ: "ನೀನೂ ಒಮ್ಮೆ ಅನುಭವಿಸಿಬಿಡು!" by ksraghavendranavada
ಉ: "ನೀನೂ ಒಮ್ಮೆ ಅನುಭವಿಸಿಬಿಡು!"